ಕಾರ್‌ ಪಲ್ಟಿ: ಚಾಲಕ ಪಾರು

ಬಂಟ್ವಾಳ, ಜು.೨೧- ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ತಾಲೂಕಿನ ಪಾಣೆಮಂಗಳೂರಿನಲ್ಲಿ ನಿನ್ನೆ ಮುಂಜಾನೆ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ತಾಲೂಕಿನ ನರಿಕೊಂಬು ನಿವಾಸಿ ಕುಶಾಂತ್ ಎಂಬವರು ಕಾರು ಚಲಾಯಿಸುತ್ತಿದ್ದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರಿನಲ್ಲಿ ರಸ್ತೆ ಬದಿಗೆ ಕಾರು ಉರುಳಿ ಬಿದ್ದಿದೆ‌. ಕುಶಾಂತ್ ಜನರೇಟರ್ ಮೆಕ್ಯಾನಿಕ್‌ ಕೆಲಸಗಾರನಾಗಿದ್ದು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬುಧವಾರ ಮುಂಜಾವ 2:30ರ ವೇಳೆಗೆ ಮನೆಗೆ ಬರುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಕಾರನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಗಿದೆ.