ಕಾರ್ ಪಲ್ಟಿ ಇಬ್ಬರಿಗೆ ಗಾಯ

. ಕೂಡ್ಲಿಗಿ.ಏ. 30:- ಕೂಡ್ಲಿಗಿಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಕಾರು ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಅಣ್ಣ ತಂಗಿಗೆ ಗಾಯವಾಗಿರುವ ಘಟನೆ ಹೈವೇ 50ರ ಚಿಲಕನಹಟ್ಟಿ ಸಮೀಪದಲ್ಲಿ ಸಂಜೆ 6ಗಂಟೆಗೆ ಜರುಗಿದೆ. ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದ ಬಳಿ ಇರುವ ಕಾವೇರಿ ಬೇಕರಿ ಮಾಲೀಕ ಮಹೇಶ ಎಂಬುವರ ಮಕ್ಕಳಾದ ಅಪ್ಪು (24)ಮತ್ತು ಕಾಜಲ್ (22)ಗಾಯಗೊಂಡವರಾಗಿದ್ದರೆ. ಇವರು ತಮ್ಮ ಸ್ವಂತ ಕಾರನ್ನು ಅಣ್ಣ ತಂಗಿ ಸೇರಿ ತೆಗೆದುಕೊಂಡು ಹೊಸಪೇಟೆ ಕಡೆಗೆ ಹೋಗುತ್ತಿರುವಾಗ್ಗೆ ಚಿಲಕನಹಟ್ಟಿ ಹತ್ತಿರ ಆಕಸ್ಮಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಬ್ಬಿಣದ ವಿಭಜಕಕ್ಕೆ ತಗುಲಿ ಕಾರು ಪಲ್ಟಿಯಾಗಿದೆ ತಕ್ಷಣ ಹೈವೇ ಆಂಬುಲೆನ್ಸ್ ನಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಇಬ್ಬರು ಗಾಯಾಳುಗಳನ್ನು ದಾಖಲಿಸಲಾಗಿದೆ ಘಟನಾ ಸ್ಥಳಕ್ಕೆ ಮರಿಯಮ್ಮನಹಳ್ಳಿ ಕ್ರೈo ಪಿಎಸ್ಐ ಮೀನಾಕ್ಷಿ, ಎಎಸ್ ಐ ಮುರಾರಿ ಮತ್ತು ಹೈವೇ ಪೆಟ್ರೋಲಿಂಗ್ ನ ರೇವಣ್ಣ ಇತರರು ಬೇಟಿ ನೀಡಿ ಪರಿಶೀಲಿಸಿದ್ದಾರೆ.