ಕಾರ್‌ನ ಗಾಜು ಒಡೆದು ಸೊತ್ತುಗಳ ಕಳವು

ಉಡುಪಿ, ಜ.೧೩- ಅಂಗಡಿ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಒಳಗೆ ಬ್ಯಾಗ್‌ನಲ್ಲಿದ್ದ ಸಾವಿರಾರು ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಘಟನೆ ಜ.೧೧ರಂದು ಸಂಜೆ ೭.೪೫ರ ಸುಮಾರಿಗೆ ನಡೆದಿದೆ.
ಕೊಡವೂರು ಖಾನಂಗಿ ನಿವಾಸಿ ನಾಗರಾಜ ಕೋಟ್ಯಾನ್ ಎಂಬವರು ತನ್ನ ಶ್ರೀ ಪೂರ್ಣ ಹೊಂ ಎಪ್ಲೆನಸ್ಸ್ ಎಂಬ ಅಂಗಡಿಯ ಸಮೀಪ ಕಾರನ್ನು ನಿಲ್ಲಿಸಿ ಕೆಲಸದ ವಿಚಾರವಾಗಿ ಮಣಿಪಾಲಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಕಾರಿನ ಹಿಂಬದಿಯ ಡೋರ್‌ನ ಗ್ಲಾಸ್‌ನ್ನು ಒಡೆದು, ಒಳಗೆ ಇದ್ದ ಬ್ಯಾಗ್‌ನ್ನು ಕಳವು ಮಾಡಿದ್ದಾರೆನ್ನಲಾಗಿದೆ. ಅದರಲ್ಲಿ ೬ ಗ್ರಾಂ ತೂಕದ ಕಪ್ಪುನೂಲಿನಲ್ಲಿ ಕಟ್ಟಿದ ತಾಯತ, ೨೨,೦೦೦ರೂ. ನಗದು, ಮೊಬೈಲ್ ಚಾರ್ಜರ್ ಹಾಗೂ ಬಟ್ಟೆಗಳಿದ್ದು,
ಇವುಗಳ ಒಟ್ಟು ಮೌಲ್ಯ ೪೭,೦೦೦ರೂ. ಎಂದು ಅಂದಾಜಿಸ
ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.