
ರಾಯಚೂರು,ಮಾ.೧೪- ಎಸ್.ಯು.ಸಿ.ಐ ಜಿಲ್ಲಾ ಕಚೇರಿಯಲ್ಲಿ ಇಂದು ವರ್ಗದ ಮಹಾನ್ ನಾಯಕ ಕಾಮ್ರೇಡ್ ಕಾರ್ಲ್ ಮಾರ್ಕ್ಸ್ ರವರ ೧೪೦ನೇ ಸ್ಮರಣ ದಿನವನ್ನು ಆಚರಿಸಲಾಯಿತು.
ಎಸ್.ಯು.ಸಿ.ಐ (ಸಿ) ನ ಜಿಲ್ಲಾ ಸಮಿತಿಯ ಹಿರಿಯ ಸದಸ್ಯ ಕಾಮ್ರೇಡ್ ಎನ್.ಎಸ್.ವೀರೇಶ್ ರವರು ದ್ವಜಾರೋಹಣ ನೆರವೇರಿಸಿ, ನಂತರ ಕಾರ್ಲ್ ಮಾರ್ಕ್ಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ತದನಂತರ ಮಾತನಾಡಿದ ಅವರು,ಕಾರ್ಲ್ ಮಾರ್ಕ್ಸ್ ಅವರು ಇಡೀ ವಿಶ್ವದ ದುಡಿಯುವ ಜನತೆಗೆ ಶೋಷಣೆ ವಿರುದ್ಧ ಹೋರಾಡಲು ಮಾರ್ಕ್ಸ್ ವಾದ, ದ್ವಂದ್ವಾತ್ಮಕ ವಸ್ತುವಾದ ಎಂಬ ತತ್ವವನ್ನು ನೀಡಿದರು.
ಅವರು ಕಾರ್ಮಿಕ ವರ್ಗ, ಬಡಜನರ ಪರ ವಹಿಸಿದ ಕಾರಣ ಅವರಿಗೆ ಸಿಕ್ಕಿದ ಬಹುಮಾನ ವೇನೆಂದರೆ ದೇಶದಿಂದ ದೇಶಕ್ಕೆ ಗಡಿಪಾರು,ಕಷ್ಟ ಕಾರ್ಪಣ್ಯಗಳು ಎಂದರು. ಅವೆಲ್ಲವನ್ನು ಎದುರಿಸಿದರು. ಕೇವಲ ನಾಲ್ಕು ಗೂಡಗಳ ಮಧ್ಯೆ ಕುಳಿತು ಪುಸ್ತಕಗಳನ್ನು ಬರೆಯದೆ ನಿರಂತರವಾಗಿ ಕಾರ್ಮಿಕ ಚಳುವಳಿ ಹೋರಾಟಗಳಲ್ಲಿ ಪಾಲ್ಗೊಂಡು ಅವರ ವಿಮುಕ್ತಿಗಾಗಿ ತಮ್ಮ ಜೀವನದ ಕಣಕಣವನ್ನು ಮುಡಿಪಾಗಿಟ್ಟರು. ೧೮೮೩ ಮಾರ್ಚ್ ೧೪ರಂದು ಮಾರ್ಕ್ಸ್ ಅವರು ಮಡಿದ ದಿನ ಆತ್ಮೀಯ ಸಂಗಾತಿ, ಇನ್ನೋರ್ವ ಮಹಾನ್ ಮಾರ್ಕ್ಸ್ ವಾದಿ ಚಿಂತಕ ಫ್ರೆಡ್ರಿಕ್ ಏಗೆಂಲ್ಸ್ ಮಾಡಿದ ಭಾಷಣದಲ್ಲಿ ಅತ್ಯಂತ ಭಾವನಾತ್ಮಕವಾಗಿ ವಸ್ತುನಿಷ್ಠವಾಗಿ ಪ್ರತಿಕ್ರಿಯೆ ನೀಡಿ ಪ್ರಪಂಚದ ಕುರಿತು ಚಿಂತಿಸುವ ಮೆದುಳು ಇಂದು ಚಿಂತಿಸುವುದು ನಿಲ್ಲಿಸಿದೆ ಎಂದು ಕಾರ್ಲ್ ಮಾರ್ಕ್ಸ್ ಅವರನ್ನು ಕುರಿತು ಹೇಳಿದ ನುಡಿಯು ಬಹಳ ಅತ್ಯದ್ಭುತವಾಗಿದೆ ಎಂದರು.
ಶೋಷಣೆಯ ವಿರುದ್ಧ ಹೋರಾಡಿ ಸಮ ಸಮಾಜದ ಸ್ಥಾಪನೆಗೆ ಕಾರ್ಲ್ ಮಾರ್ಕ್ಸ್ ಅವರ ವೈಚಾರಿಕ ಅಸ್ತ್ರ ಇವತ್ತು ನಮಗೆ ದೊರಕಿದೆ.ಅದರಂತೆ ಅವರ ಕನಸನ್ನು ನನಸು ಮಾಡಲು ಕಾರ್ಮಿಕ ವರ್ಗದ ವಿಮುಕ್ತಿಗಾಗಿ ಹೋರಾಡಲು ಪ್ರತಿಯೊಬ್ಬರು ಸಂಕಲ್ಪ ತಡೋಣ ಎಂದುರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ಚನ್ನಬಸವ ಜಾನೇಕಲ್, ಅಣ್ಣಪ್ಪ, ಹಯ್ಯಾಳಪ್ಪ, ವಿನೋದ್, ಪೀರ್ ಸಾಬ್, ಬಸವರಾಜ್, ಯಲ್ಲಪ್ಪ, ನಿತಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.