ಕಾರ್ಲ್ ಮಾಕ್ರ್ಸ್ ಸ್ಮರಣ ದಿನ

ಶಹಾಬಾದ:ಮಾ.15:ಯಾರು ಜನ ಸಾಮಾನ್ಯರ ಒಳಿತಿಗಾಗಿ ದುಡಿಯುವುದರಲ್ಲಿಯೇ ಉದ್ದಾತ್ತತೆಯನ್ನು ಕಾಣುವರೋ ಅವರನ್ನು ಇತಿಹಾಸವು ಸರ್ವಶ್ರೇಷ್ಠರೆಂದು ಗುರುತಿಸುತ್ತದೆ ಎಂದು ಎಸ್.ಯು.ಸಿ.ಐ (ಸಿ) ಕಲಬುರಗಿ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪೂರ ಹೇಳಿದರು. ಅವರು ಎಸ್.ಯು.ಸಿ.ಐ. (ಸಿ) ಪಕ್ಷದ ಸ್ಥಳೀಯ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಲ್ ಮಾಕ್ರ್ಸ ರವರ 140ನೇ ಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚಕ್ಕೆ ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕವಾಗಿ ತೋರಿಸಿಕೊಟ್ಟರು. ಇಡಿ ವಿಶ್ವದ ದುಡಿಯುವ ಜನರ ವಿಮುಕ್ತಿಯು ಇವರ ತತ್ವಜ್ಞಾನದಿಂದ ಮಾತ್ರ ಸಾಧ್ಯ ಅದನ್ನು ಕಾರ್ಮಿಕ ವರ್ಗ ಅರ್ಥ ಮಾಡಿಕೊಂಡು ಮಾನವನಿಂದ ಮಾನವನ ಶೋಷಣೆ ರಹಿತ ಸಮಾಜವಾದಿ ಸಮಾಜ ತರಲು ಹೋರಾಡಬೇಕಿ ಎಂದರು. ಎಸ್.ಯು.ಸಿ.ಐ. (ಸಿ) ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ. ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ ಜಗನ್ನಾಥ ಎಸ್.ಹೆಚ್. ಕಾರ್ಯಕ್ರಮದಲ್ಲಿ ಬಾಗಣ್ಣ ಬುಕ್ಕ, ರಮೇಶ ದೇವಕರ, ಶಿವಕುಮಾರ ಕುಸಾಳೆ, ಆನಂದ, ಪ್ರವೀಣ ರಾಧಿಕಾ, ಇತರರು ಇದ್ದರು.