ಕಾರ್ಲ್ ಮಾಕ್ರ್ಸ್ ಸ್ಮರಣ ದಿನ ಆಚರಣೆ

ಯಾದಗಿರಿ,ಮಾ.15-ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಕಾರ್ಲ್ ಮಾಕ್ರ್ಸ್ ರವರ 140ನೇ ಸ್ಮರಣ ದಿನ ಅಂಗವಾಗಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ (ಎಸ್.ಯುಸಿಐ(ಸಿ) ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸ್ಮರಣ ದಿನವನ್ನು ಆಚರಿಸಲಾಯಿತು.
ಕಾರ್ಮಿಕ ವರ್ಗದ ಮಹಾನ್ ನಾಯಕರು, ತತ್ವಜ್ಞಾನಿಗಳು, ಶಿಕ್ಷಕರಾದ ಕಾ.ಕಾರ್ಲ್ ಮಾಕ್ರ್ಸ್ ಅವರ ಭಾವಚಿತ್ರಕ್ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ.ಕೆ. ಸೋಮಶೇಖರ್ ಅವರು ಮಾಲಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾ. ಡಿ ಉಮಾದೇವಿ ಅವರು ಸಹ ಹೂಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಮಲಿಂಗಪ್ಪ ಬಿ.ಎನ್, ಶಿಲ್ಪಾ ಬಿ.ಕೆ, ಮಹ್ಮದ್ ಅಶ್ರಫ್, ಮಹ್ಮದ್ ಕೈಫ್, ಲಕ್ಷ್ಮಣ್ ಸೇರಿದಂತೆ ಇತರರು ಇದ್ದರು.