ಕಾರ್ಯ ನಿರ್ವಹಿಸಲು ವಿಡಿಯೋ ಗ್ರಾಫರ್, ಛಾಯಾಗ್ರಾಹಕರಿಗೆ ಅವಕಾಶ ನೀಡಿ

ಹುಬ್ಬಳ್ಳಿ, ಏ24: ಕೊರೊನಾ ನೈಟ್ ಕಫ್ರ್ಯೂ ಹಾಗೂ ವಿಕೇಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಕೆಲವು ಕಠಿಣ ಕ್ರಮಗಳನ್ನು ಹೊರಡಿಸಿದ್ದು ರಾಜ್ಯ ಸರ್ಕಾರ ಕೆಲವು ಸೇವೆಗಳಿಗೆ ಅನುವು ಮಾಡಿಕೊಟ್ಟಿದ್ದು, ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಿಸಿದ್ದಕ್ಕೆ ಹುಬ್ಬಳ್ಳಿ ಫೋಟೊ ಮತ್ತು ವಿಡಿಯೋ ಗ್ರಾಫರ್ ಸಂಘ ತೀವ್ರವಾಗಿ ಖಂಡಿಸಿದೆ.
ಕೊರೊನಾದಿಂದಾಗಿ ಕಳೆದ ವರ್ಷವೂ ಲಾಕ್‍ಡೌನ್ ವೇಳೆ ಫೋಟೋ ಸ್ಟುಡಿಯೋಗಳು ಬಂದಾಗಿದ್ದು, ಅಪಾರ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದೇವೆ. ಈ ವರ್ಷವೂ ಕೂಡ ಸರಕಾರ ಮದುವೆ ಸಮಾರಂಭಗಳಿಗೆ ಷರತ್ತು ಬದ್ಧ ಅವಕಾಶ ಕೊಟ್ಟು ಫೆÇೀಟೋ ಸ್ಟುಡಿಯೋಗಳನ್ನು ಬಂದ್ ಮಾಡಿಸಿದ್ದು, ಕನಿಷ್ಠಪಕ್ಷ ಮದುವೆಯಲ್ಲಿ ಛಾಯಾಗ್ರಾಹಕರಿಗೆ ಆದರೂ ಕೂಡ ಪರವಾನಿಗೆ ಕೊಡಬಹುದಿತ್ತು. ಅದು ಕೂಡ ಕೊಟ್ಟಿಲ್ಲ ಸ್ಟುಡಿಯೋಗಳು ಕೂಡ ಬಂದ್ ಮಾಡಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕಿರಣ ಬಾಕಳೆ ತಿಳಿಸಿದರು.
ಕೋವಿಡ್ ನಿಯಮಾನುಸಾರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಮದುವೆ ಕಾರ್ಯಕ್ರಮಗಳಲ್ಲಿ ಅವಕಾಶ ಮಾಡಿಕೊಡಿ ಎಂದು ಹುಬ್ಬಳ್ಳಿ ಫೆÇೀಟೋ ಮತ್ತು ವಿಡಿಯೋಗ್ರಾಫರ್ ಸಂಘ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.