ಕಾರ್ಯಾಲಯ ಉದ್ಘಾಟನೆ

ಲಕ್ಷ್ಮೇಶ್ವರ,ಜೂ6: ತಾಲೂಕ ಪಂಚಾಯತಿಯಲ್ಲಿ ಶಾಸಕರ ಜನ ಸಂಪರ್ಕ ಕಾರ್ಯಾಲಯವನ್ನು ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಸೋಮವಾರ ಉದ್ಘಾಟಿಸಿದರು.
ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಈ ಕಾರ್ಯಾಲಯವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಯಾವುದೇ ದೂರು ಧುಮಾನಗಳನ್ನು ಕಚೇರಿಗೆ ಸಲ್ಲಿಸಿದರೆ ಅವುಗಳನ್ನು ಪರಿಗಣಿಸಿ ಆಯಾ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಕೆ ಆನಂದ್ ಸೀಲ್ ತಾಲೂಕ ಪಂಚಾಯತಿ ಆಡಳಿತ ಅಧಿಕಾರಿ ಎಂವಿ ಚಳಗೇರಿ ಎಂ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಸಿಪಿಐ ವಿಕಾಸ್ ಲಮಾಣಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.