ಕಾರ್ಯಾಧ್ಯಕ್ಷರಾಗಿ ಮಹಮ್ಮದ್ ಆಜಾದ್ ನೇಮಕ

ರಾಯಚೂರು.ನ.೧೬- ಗ್ರಾಮಾಂತರ ಕ್ಷೇತ್ರದ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಮಹಮ್ಮದ್ ಆಜಾದ್ ಶಕ್ತಿನಗರ ರವರನ್ನು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ವಿರೂಪಾಕ್ಷಿ ಹಾಗೂ ಸಂಭವನೀಯ ಅಭ್ಯರ್ಥಿಯಾದ ಕೆ.ಸಣ್ಣ ನರಸಿಂಹ ನಾಯಕ್ ರವರ ಆದೇಶದ ಮೇರೆಗೆ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್.ಟಿ.ಘಟಕದ ಅಧ್ಯಕ್ಷರಾದ ಹಂಪಯ್ಯ ನಾಯಕ್ ಮಾಲದೊಡ್ಡಿ, ಯುವ ಘಟಕದ ಅಧ್ಯಕ್ಷರಾದ ವಿಶ್ವನಾಥ್ ಪಾಟೀಲ್, ನರಸಪ್ಪ ಆಶಾಪುರು, ಅಲ್ತಾಫ್ ಶಕ್ತಿನಗರ, ಸೈಯದ್ ಭಾವ ಸಾಬ್, ಮೋಹಿನುದ್ದಿನ್, ಬಾಬು, ಮೊಮ್ಮದ್ ರಫಿ, ಅಬ್ದುಲ್ ರಫೀಕ್ ಮಕ್ಬುಲ್ ರವರು ಉಪಸ್ಥಿತರಿದ್ದರು.