ಕಾರ್ಯಾಧ್ಯಕ್ಷರಾಗಿ ಗುರಿಕಾರ ಆಯ್ಕೆ

ಧಾರವಾಡ ನ 17 ; ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಕಾರ್ಯಾಧ್ಯಕ್ಷರಾಗಿ ಶಿಕ್ಷಕ ಮುಖಂಡ ಬಸವರಾಜ ಗುರಿಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಹಾರ ರಾಜ್ಯದ ಬೋದಗಯಾದಲ್ಲಿ ಸೋಮವಾರ ಜರುಗಿದ ಅಖಿಲ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ದ ಜನರಲ್ ಕೌನ್ಸಿಲ್ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಮಪಾಲ್ ಸಿಂಗ್, ಕಾರ್ಯಾಧ್ಯಕ್ಷರಾಗಿ ಬಸವರಾಜ ಗುರಿಕಾರ, ಮಹಾಪ್ರಧಾನ ಕಾರ್ಯದರ್ಶಿಯಾಗಿ ಕಮಲಕಾಂತ ತ್ರಿಪಾಠಿ ಆಯ್ಕೆಯಾಗಿದ್ದಾರೆ.
ಬಸವರಾಜ ಗುರಿಕಾರ ಅವರು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಅಖಿಲ ಭಾರತ ಶಿಕ್ಷಕರ ಫೆಡರೇಷನ್ ದೇಶದ್ಯಾಂತ 30 ಲಕ್ಷ ಶಿಕ್ಷಕರನ್ನು ಪ್ರತಿನಿಧಿಸುತ್ತಿದೆ. ಅಂತರಾಷ್ಟ್ರೀಯ ಶಿಕ್ಷಕ ಸಂಘಟನೆಯ ಸಂಯೋಜನೆ ಹೊಂದಿರುವ ಎಐಪಿಟಿಎಫ್ ನ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ರಾಜ್ಯದ ಶಿಕ್ಷಕ ಪ್ರತಿನಿಧಿಗಳು ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದರು.