ಕಾರ್ಯಪ್ಪ ಶಿಕ್ಷಣ ಸಂಸ್ಥೆಗಳಲ್ಲಿ “ಭಾರತದ ಸಂವಿಧಾನ ದಿನಾಚರಣೆ”

ಕೋಲಾರ,ನ.೨೯-ಬಂಗಾರಪೇಟೆ ತಾಲ್ಲೂಕು ಹಂಚಾಳಗೇಟ್‌ನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಕೀರ್ಣದಲ್ಲಿ “ಭಾರತದ ಸಂವಿಧಾನ ದಿನಾಚರಣೆ” ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಸಿ.ಅಮರ್‌ನಾಥ್ ಜ್ಯೋತಿ ಬೆಳಗಿಸುವುದರ ಮೂಖಾಂತರ ಉದ್ಘಾಟಿಸಿದರು.
ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಭಾರತ ದೇಶಕ್ಕೆ ಭದ್ರ ಭುನಾದಿ ಹಾಕುವಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಷ್ಟ್ರರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿಶ್ರಮದಿಂದ ಎಲ್ಲಾ ಭಾರತೀಯರಿಗೂ ಅನ್ವಯವಾಗುವಂಥಹ ಭಾರತೀಯರ ಏಳಿಗೆಗಾಗಿ ಆಡಳಿತ ಚುಕ್ಕಾಣಿಗಾಗಿ ಸಂವಿಧಾನ ರಚಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ಸಂವಿಧಾನ ದಿನಾಚರಣೆಯ ಶುಭಾಶಯಗಳನ್ನು ಹಂಚಿಕೊಂಡು ಭಾರತದ ಸತ್ಪ್ರಜೆಗಳಾಗಿ ನಾವು ರೂಪಿಸಿಕೊಳ್ಳುವಲ್ಲಿ ಸಂವಿಧಾನದ ಪಾತ್ರ ಏನು? ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಎ.ಮುನಿರೆಡ್ಡಿ, ಸಮಿತಿಯ ಪದಾಧಿಕಾರಿಗಳು, ಆಡಳಿತಾಧಿಕಾರಿ ಎಸ್.ಲಕ್ಷ್ಮೀನಾರಾಯಣರೆಡ್ಡಿ ಸಂವಿಧಾನದ ಆಶಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದು ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕೆಂದು ತಿಳಿಸಿದರು.ಶಿಕ್ಷಕ ಆದಿಬಯ್ಯಪ್ಪ ಸಂವಿಧಾನದ ರಚನೆ, ರಚನಾಸಭೆಯ ಸದಸ್ಯರು, ಅವಧಿ ಮತ್ತು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯ ನಿರ್ದೇಶಾತ್ಮಕ ತತ್ವಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಆಢಳಿತಾಧಿಕಾರಿ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಸತೀಶ್, ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು, ಪ್ರಾರ್ಥನೆ ದೀಕ್ಷಾ ತಂಡದಿಂದ, ವಿ.ಸ್ವರ್ಣಲತ ಸ್ವಾಗತ ಕೋರಿದರು. ಶಿಕ್ಷಕ ಎಂ.ಪಾಪಣ್ಣ ನಿರೂಪಿಸಿ ವಂದಿಸಿದರು.