ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕ್ಕೆ ಅಧ್ಯಕ್ಷ ಆಯ್ಕೆ

ಕಂಪ್ಲಿ, ಏ.22- ಪಟ್ಟಣದ ಅತಿಥಿ ಗೃಹದಲ್ಲಿ ಕರ್ನಾಟಕ ಕಾರ್ಯನಿರತ ಬುಧವಾರದಂದು ಜರುಗಿದ ಪತ್ರಕರ್ತರ ಸಭೆಯಲ್ಲಿ 2021-22ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಬೆಳಗೋಡ್ ರಸೂಲ್ ಅವಿರೋಧ ಆಯ್ಕೆ ಮಾಡಲಾಯಿತು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಬಳ್ಳಾರಿ ಜಿಲ್ಲಾಧ್ಯಕ್ಷ ಜಗನ್ ಮೋಹನ್‍ರೆಡ್ಡಿ ನಿರ್ದೇಶನ ಮೇರೆಗೆ ಕಂಪ್ಲಿ ತಾಲೂಕು ಘಟಕ ಅಧ್ಯಕ್ಷರನ್ನಾಗಿ ರಸೂಲ್ ಅವಿರೋಧವಾಗಿ ಆಯ್ಕೆ ಮಾಡಿದ್ದು, ಎಲ್ಲಾ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕಿನ ವಿವಿಧ ದಿನಪತ್ರಿಕೆಗಳ ವರದಿಗಾರರಾದ ವಿರೂಪಾಕ್ಷಯ್ಯಸ್ವಾಮಿ, ಹೆಚ್ ಎಂ ಪಂಡಿತಾರಾಧ್ಯ, ಕರಿ ವಿರೂಪಾಕ್ಷಿ, ಪಿ.ವಿರೇಶ್, ಯಮನೂರಪ್ಪ, ತಿಮ್ಮಾರೆಡ್ಡಿ, ದ್ಯಾಮನಗೌಡ, ರವಿ ಮಣ್ಣೂರು, ಗಾದಿಲಿಂಗ, ಬಸಯ್ಯಸ್ವಾಮಿ, ಡಿ.ಇಸ್ಮಾಯಿಲ್, ಅಮರ್‍ನಾಥ ಶಾಸ್ತ್ರಿ, ಜಿ.ಚಂದ್ರಶೇಖರಗೌಡ, ಕುರುಗೋಡು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಮಣ್ಣೂರು, ಕಿಸಾನ್ ಜಾಗೃತಿ ವಿಕಾಸ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಿ.ಯುಗಂಧರ್ ನಾಯ್ಡು ಸೇರಿದಂತೆ ಅನೇಕರಿದ್ದರು.