ಕಾರ್ಯನಿರತರ ಪತ್ರಕರ್ತರ ಸಂಘದಿಂದ ತಿಪ್ಪನಗೌಡ ಪಾಟೀಲರ ನಿಧನಕ್ಕೆ ಸಂತಾಪ

ಕೊಪ್ಪಳ, ಮೇ.29 ಜಿಲ್ಲೆಯ ಹೊಸದಿಗಂತ ಕನ್ನಡ ದಿನ ಪತ್ರಿಕೆಯ ಜಿಲ್ಲಾ ವರದಿಗಾರರಾದ ಸಹೃದಯಿ ಪತ್ರಕರ್ತ, ತಿಪ್ಪನಗೌಡ ಪೊಲೀಸ್ ಪಾಟೀಲ್ ನಿನ್ನೆ ರಾತ್ರಿ ಕೊರೊನಾ ಮಹಾಮಾರಿಗೆ ಬಲಿಯಾಗಿ ವಿಧಿವಶರಾದರು. ಬಹುಮುಖ ಪ್ರತಿಭಾನ್ವಿತರಾಗುವುದರ ಜೊತೆಗೆ ಸರಳ ಸಹೃದಯವಂತರಾಗಿದ್ದರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಾಧೀಕ್ ಅಲಿ ಹೇಳಿದರು.
ಅವರು ನಗರದ ಸುದಿನ ದಿನ ಪತ್ರಿಕೆಯ ಕಚೇರಿಯಲ್ಲಿ ಪತ್ರಕರ್ತ ತಿಪ್ಪನಗೌಡರ ಪಾಟೀಲ ನಿಧನಕ್ಕೆ ಸಂತಾಪ ಸೂಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ತಿಪ್ಪನಗೌಡರ ಪತ್ರಿಕಾ ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಅವರ ನಿಧನದ ಸುದ್ದಿ ಕೇಳಿ ನಮಗೆಲ್ಲ ತೀವ್ರ ತರಹದ ದುಃಖವಾಗಿದೆ ಎಂದು ಸಂತಾಪ ಸೂಚಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯದರ್ಶಿ ಎಚ್.ಎಸ್.ಹರೀಶ್ ಮಾತನಾಡಿ, ತಿಪ್ಪನಗೌಡರವರು ಕೇವಲ ಪತ್ರಕರ್ತರಾಗಿರದೆ ಹಲವಾರು ನಾಟಕಗಳಲ್ಲಿ ಪಾತ್ರ ಮಾಡುತ್ತಾ, ಅನೇಕ ಸಾಮಾಜಿಕ
ಹಾಗೂ ಪೌರಾಣಿಕ ಸಂದರ್ಭಗಳ ಮಾತುಗಳನ್ನು ಮೆಲುಕಾಕುತ್ತಿದ್ದರು.ಹೀಗೆ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ಜಿಲ್ಲಾ ಕಾ.ನಿ.ಪತ್ರಕರ್ತ ಸಂಘದ ಉಪಾಧ್ಯಕ್ಷ ಬಸವರಾಜ ಗುಡ್ಲಾನೂರ ಮಾತನಾಡುತ್ತಾ,
ತಿಪ್ಪನಗೌಡರು ಸರಳ ಬುದ್ದಿ ಜೀವಿಗಳು, ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣುವ
ಹೃದಯವಂತರಾಗಿದ್ದರು. ರಾಜಕೀಯ ಮತ್ತು ಸಾಹಿತ್ಯಿಕವಾಗಿ ಅನೇಕ ವಿಶೇಷ ಸುದ್ದಿಗಳನ್ನು ಬರೆಯುವ ಚಾಕುಚಕ್ಕತೆಯ ಕಲೆ ಅವರಲ್ಲಿಯಿತ್ತು.ಹೀಗಾಗಿ ಅವರ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತೀವ್ರ ತರಹವಾಗಿ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.