
ಹಾವೇರಿ,ಮಾ.1: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ 13 ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಬೆಳಗಾವಿಯಲ್ಲಿ ಸೋಮವಾರ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಹಾವೇರಿ, ಕರ್ಜಗಿ ಮತ್ತು ಗುತ್ತಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರೈತರು ಕಾರ್ಯಕ್ರಮವನ್ನು ವೀಕ್ಷಿಸಿದರು ಹಾವೇರಿ ತಾಲ್ಲೂಕಿ 28,291 ಫಲಾನುಭವಿಗಳಿಗೆ ತಲಾ ರೂ.2,000/-ರಂತೆ ಒಟ್ಟು 5 ಕೋಟಿ 65 ಲಕ್ಷ ಹಣ 13 ನೇ ಕಂತು ಬಿಡುಗಡೆಯಾಗಲಿದೆ. ಎಲ್ಲಾ ರೈತರು ಕಡ್ಡಾಯವಾಗಿ e-ಞಥಿಛಿ ಮಾಡಿಕೊಂಡು ಸದರಿ ಸವಲತ್ತು ಪಡೆಯಲು ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾವೇರಿ ಉಪವಿಭಾಗದ ಉಪ ಕೃಷಿ ನಿರ್ದೇಶಕರಾದ ಹುಲಿರಾಜ.ಹೆಚ್. ಅವರು ರೈತರಿಗೆ e-ಏಙಅ ಕುರಿತು ಸೂಚನೆಗಳ ಮಾಹಿತಿ ನೀಡಿದರು ಹಾಗೂ ರೈತರ ಇತರೆ ಸಮಸ್ಯೆಗಳಿಗೆ ಸ್ಪಂದಿಸಿದರು. ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಹೆಚ್, ಕೃಷಿ ಅಧಿಕಾರಿಗಳು, ಆತ್ಮ ತಾಂತ್ರಿಕ ಅಧಿಕಾರಿಗಳು ಹಾಗೂ ಇನ್ನಿತರ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.