ಕಾರ್ಯಕ್ರಮಗಳ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ


ಸಂಜೆವಾಣಿ ವಾರ್ತೆ
ಸಂಡೂರು: ಜ: 17: ಯಾವುದೇ ಕಾರ್ಯಕ್ರಮಗಳಿರಲಿ ಸರ್ವರ ಸಹಕಾರ ಅಗತ್ಯ, ಜನವರಿ 26 ಗುರುವಾರ ನನ್ನ ಕಛೇರಿಯಲ್ಲಿ 7.30ಕ್ಕೆ ಧ್ವಜಾರೋಹಣ ನಂತರ 8.30ಕ್ಕೆ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಪಥ ಸಂಚಲನ 8 ರಿಂದ 10 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ತೋರಣಗಲ್ಲಿನ ವಿಜಯಕುಮಾರ, ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ಶಿಕ್ಷಕಿ ಗೀತಾ, ಈರಣ್ಣನವರು ನಾಡಗೀತೆ, ರೈತಗೀತೆ ಕಾರ್ಯಕ್ರಮವನ್ನು ನಡೆಸಿಕೊಡುವರು ಎಂದು ಸಂಡೂರಿನ ತಹಶೀಲ್ದಾರ್ ರಾಷ್ಟ್ರೀಯ ನಾಡ ಹಬ್ಬ ಆಚರಣೆ ಸಮಿತಿ ಅಧ್ಯಕ್ಷರಾದ ಕೆ.ಎಂ. ಗುರುಬಸವರಾಜ ತಿಳಿಸಿದರು.
ಅವರು ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ತಹಶೀಲ್ದಾರರ ಕಛೇರಿಯಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತ ಸಂಘದವತಿಯಿಂದ ಆರು ಕಾಯಕ ಯೋಗಿಗಳಿಗೆ ಅಂದರೆ ಯೋಗ ಗುರು ಶಂಕರ್ ಚೋರನೂರಿನ ಗ್ರಾ.ಪಂ. ಸದಸ್ಯೆ ಅಂಜಿನಮ್ಮ ಜೋಗತಿ, ಬಂಡ್ರಿಯ ದುರುಗಪ್ಪ, ಕುಸ್ತಿಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಶಿಕ್ಷಕಿ ಶಾಂತವ್ವ, ಕೆರನಳ್ಳಿ ಬಸಪ್ಪ ಭುಜಂಗನಗರ, ಶಿಲ್ಪ ಕಲಾ ವಿಭಾಗ ಮುನಿರತ್ನಾಚಾರ್ ಇವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವದು, ಕೃಷಿ ಇಲಾಖೆಯಿಂದ ಸ್ಥಬ್ಧ ಚಿತ್ರ , ಪುರಸಭಾ ವತಿಯಿಂದ ಪೆಂಡಾಲ್ ಮತ್ತು ಕುರ್ಚಿ, ಅಬಕಾರಿ ಇಲಾಖೆ ಸಣ್ಣ ನೀರಾವರಿ ಇಲಾಖೆ ವಿವಿಧ ಇಲಾಖೆ ಒಂದೊಂದು ರೀತಿಯ ಹೊಣೆಗಾರಿಕೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್‍ರವರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆಗಾರಿಕೆಯನ್ನು ನೀಡಲಾಯಿತು.
ಗ್ರಾಮ ವಾಸ್ತವ್ಯ ಮುಂದೂಡಿಕೆ: – ಬಳ್ಳಾರಿ ಉತ್ಸವ 21, 22 ರಲ್ಲಿ ನಡೆಯುವುದರಿಂದ ಸಂಡೂರಿನ ತುಂಬರಗುದ್ದಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದೂಡಲಾಗಿದ್ದು ಜಿಲ್ಲಾಧಿಕಾರಿಗಳವರು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರೊಡನೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಂಡೂರಿನ ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು. ಸಭೆಯಲ್ಲಿ ಸಂಜೆ ವಾಣಿ ವರದಿಗಾರರು ತಹಶೀಲ್ದಾರರವರಿಗೆ ಒಂದು ಕಡೆ ಬಳ್ಳಾರಿ ಉತ್ಸವ , ಮತ್ತೊಂದು ಕಡೆ ಗ್ರಾಮ ವಾಸ್ತವ್ಯ ಎರಡರಲ್ಲಿಯೂ ತಹಶೀಲ್ದಾರ್ ಭಾಗಿಯಾಗಬೇಕು ಅಗಾದರೆ ಯಾವುದನ್ನು ನಿಲ್ಲಿಸುವುದು ಎಂದಾಗ ತಹಶೀಲ್ದಾರ್ ಅವರು ಮಾಹಿತಿ ನೀಡಿ ಈ ಪ್ರಶ್ನೆ ಬಹು ಉತ್ತಮವಾದುದು ತಕ್ಷಣವಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಶಾಸಕರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಿ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಸಲಾಗುವುದು, ಈ ಸದ್ಯ ಗ್ರಾಮವಾಸ್ತವ್ಯ ಮುಂದೂಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ತಾ.ಪಂ. ಅಧಿಕಾರಿ ಷಡಾಕಕ್ಷರಯ್ಯ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿವಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.