ಕಾರ್ಯಕರ್ತರ ಸಂಘಟನಾತ್ಮ ಚಟುವಟಿಕೆಯಿಂದ ಪಕ್ಷ ಸದೃಢ:

ಸೊರಬ.ನ.೫:ಪಕ್ಷದ ಕಾರ್ಯಕರ್ತರ ಹಾಗೂ ಅವರ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳಿಂದ ಸದೃಢವಾದ ಪಕ್ಷದ ನಿರ್ಮಾಣ ಸಾಧ್ಯ ಎಂದು ಶಾಸಕ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶನಿವಾರ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕಿನ ಬಿಜೆಪಿ ಮಂಡಲದ ಕಾರ್ಯಕಾರಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಪರಿವರ್ತನಾ ಯಾತ್ರೆಯ ಮೂಲಕ ಪಕ್ಷ ಸಂಘಟನೆಯಲ್ಲಿ  ರಾಜ್ಯದಲ್ಲಿ ಸಂಚಲನ ವನ್ನುಂಟು ಮಾಡಲಾಗಿತ್ತು.ಇದೇ ರೀತಿಯಾದ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ   ಹಮ್ಮಿಕೊಂಡು 3ತಂಡಗಳನ್ನು ನೇಮಿಸುವ ಮೂಲಕ   ಜನ ಸಂಕಲ್ಪ ಯಾತ್ರೆಯನ್ನು ನಡೆಸಲಾಗುತ್ತಿದೆ . ನ.೧೫ ರಂದು  ಆನವಟ್ಟಿಯಲ್ಲಿ ಬೃಹತ್ ಜನ ಸಂಕಲ್ಪ ಯಾತ್ರೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಜನ ಸ್ಪಂದನ ಯಾತ್ರೆ.ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಂತಹ ಸಮಾವೇಶಗಳನ್ನು ಸರ್ಕಾರದ ವತಿಯಿಂದ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ.ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಅತಿ ದೊಡ್ಡ ಸಮಾವೇಶವನ್ನು ನಡೆಸುವ ಮೂಲಕ ಪಕ್ಷ ಸಂಘಟನೆಗೆ ಮುನ್ನುಡಿ ಬರೆಯಲಾಗಿದೆ.ಸಂಘಟನೆ ಮತ್ತು ಚುನಾವಣೆಗಳಿಗೆ ಸಂಬಂಧವಿರದಿದ್ದರೂ ಚುನಾವಣೆಗಳು ನಿಮಿತ್ತವಾಗಿ ಸಂಘಟನಾತ್ಮಕ ಚಟುವಟಿಕೆಗಳು ಎಂದಿಗೂ ನಿರಂತರವಾಗಿರುತ್ತವೆ  ಇಂತಹ ಸಂಘಟನೆಯಿಂದ  ಸದೃಢವಾದ ಪಕ್ಷದ ನಿರ್ಮಾಣ ಸಾಧ್ಯ ಎಂದರು. ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್,ಜಿಲ್ಲಾ ವಿಭಾಗೀಯ ಪ್ರಭಾರ ಗಿರೀಶ್ ಪಟೇಲ್,ಬಿ ಕೆ ಶ್ರೀನಾಥ್,ದೇವೇಂದ್ರಪ್ಪ ಚನ್ನಾಪುರ,ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು,ಮಲ್ಲಿಕಾರ್ಜುನ್ ವೃತ್ತಿಕೊಪ್ಪ,ಪುರಸಭಾ ಅಧ್ಯಕ್ಷ ವಿರೇಶ್ ಮೇಸ್ತ್ರಿ,ಎಂ ಡಿ ಉಮೇಶ್,ಪುರಸಭಾ ಸದಸ್ಯರಾದ ನಟರಾಜ್,ಪ್ರಭು,ಜಯಲಕ್ಷ್ಮಿ,ಅಶೋಕ್ ಶೇಟ್,ಸುಧಾಮಣಿ,ಕನಕದಾಸ,ಷಣ್ಮುಖಪ್ಪ ಅಂಡಿಗೆ,ಸೇರಿದಂತೆ ಮೊದಲಾದವರಿದ್ದರು.

Attachments area