
ಜೇವರ್ಗಿ :ಆ.12: ತಾಲೂಕಿನ ಬಿಜೆಪಿ ಕಾರ್ಯಕರ್ತರು ಬಹಳ ಶ್ರಮಪಟ್ಟು ಪಕ್ಷದ ಕೆಸಲವನ್ನು ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೀವರಾಜ ಪಾಟೀಲ್ ರದ್ದೆವಾಡಗಿ ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಕೋಳೂರು ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು.
ವಿಜಯೋತ್ಸವದಲ್ಲಿ ಬಾಗಿಯಾಗಿ ಶಿವರಾಜ ಪಾಟೀಲ್ ರದ್ದೆವಾಡಗಿ ಮಾತನಾಡಿ ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಹಿಂದೆ ಆ ಭಗವಂತ ಇದ್ದೆಇರುತಾನೆ. ಅವರು ಪಕ್ಷದ ಏಳಿಗೆಗೆ ಶ್ರಮಿಸಿ ಪಕ್ಷಕ್ಕೆ ನ್ಯಾಯಯುತವಾಗಿ ದುಡಿದರೆ ಪಕ್ಷದಿಂದ ಒಂದಿಲ್ಲೋಂದು ರೀತಿಯಲ್ಲಿ ಅಧೀಕಾರ ಸಿಗುತ್ತದೆ. ಕೊಳಕೂರ ಗ್ರಾಮದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಐಕೆಯಾಗಿದ್ದು ನಮಗೆ ಮತ್ತು ಮನ್ಮ ಪಕ್ಷಕ್ಕೆ ತುಂಬಾ ಸಂತೋಷ ತಂದಿದೆ. ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿದರೆ ಅವರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದರು. ಅಧ್ಯಕ್ಷ ಉಪಾಧ್ಯಕ್ಷಕರಿಗೆ ಅಭಿನಂದನೆಗಳು ಸಲ್ಲಿಸಿದರು.
ಒಟ್ಟು 17 ಮತಗಳಲ್ಲಿ 14 ಮತ ಪಡೆದು ನೀಲಮ್ಮ ಗಂಡ ಬಸವರಾಜ್ ಕಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಜಯಲಕ್ಷ್ಮಿ ಶಾಮರಾವ್ ಗುಂಡೆದ 17 ಮತಗಳಲ್ಲಿ 10 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ ರದ್ದೇವಾಡಗಿ, ಗುರುಶಾಂತಗೌಡ ಸಿಕ್ಕಿದ್, ಅಶೋಕ್ ಗೌನಳ್ಳಿ, ಬಾಪುಗೌಡ ಗೌನಳ್ಳಿ, ವೀರಣ್ಣ ಗುತ್ತ, ಮಲ್ಲಣ್ಣ ಕುಲಕರ್ಣಿ, ಆನಂದ ಹೊಸಮನಿ, ತಿಪ್ಪಣ್ಣಗೌಡ ಗೌನಳ್ಳಿ, ರಾಯಪ್ಪ ಕೋಳಕೂರ, ಬಸವರಾಜ ಕಟ್ಟಿ, ಈರಣ್ಣ ಯಾದವ್, ಪಿರಣ್ಣ ಗುತ್ತ, ಈರಣ್ಣ ಕಂಬಾರ, ಗುಂಡೆರಾಯ ಬೈರಾಮಡಗಿ, ಬಾಗಣ್ಣ ಯಾದವ, ಮಲ್ಲಣ್ಣ ತೊಟ್ನಳ್ಳಿ, ಭೀಮಣ್ಣ ನಾಟೀಕರ್, ಬಸಣ್ಣ ಹನೂರ, ಸಿದ್ದು ಕೂಡಿ, ಹಣಮಂತ್ರಾಯ ಗೌನಳ್ಳಿ ಸೆರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.