ಕಾರ್ಯಕರ್ತರ ಮೇಲೆ ಹಲ್ಲೆ ಕ್ರಮಕ್ಕೆ ಮಾಜಿ ಶಾಸಕರ ಒತ್ತಾಯ

(ಸಂಜೆವಾಣಿ ವಾರ್ತೆ)
ಸುರಪುರ : ನ.11:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡೇಕಲ್ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕಾಂಗ್ರೆಸ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಕೂಡಲೇ ಆರೋಪಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಜಿಲ್ಲಾ ಪೆÇಲೀಸ್ ವರಿಷ್ಠಾದಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಲವು ಬಾರಿ ಇಂತಹ ಘಟನೆಗಳು ಸಂಭವಿಸಿದಾಗ ಪೆÇಲೀಸ್ ಠಾಣೆಗೆ ದೂರನ್ನು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸದೆ ಇರುವುದನ್ನು ಗಮನಿಸಿದರೆ ಆರೋಪಿತರೊಂದಿಗೆ ಶಾಮೀಲಾಗಿ ಆರೋಪಿಗಳನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ದಿನಾಂಕ 08.11.2021 ರಂದು ರಾಯನಪಾಳ್ಯ ಗ್ರಾಮದ ಪರಶುರಾಮ ಎನ್ನುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕೊಡೇಕಲ್ ಗ್ರಾಮದಲ್ಲಿ ಹಲ್ಲೆ ಘಟನೆ ನಡೆದಿದೆ ಮತ್ತು ಕಳೆದ ಸೆಪ್ಟೆಂಬರನಲ್ಲಿ ಕಾನೂನು ಬಾಹಿರವಾಗಿ ಟಗರು ಕಾಳಗವನ್ನು ಆಯೋಜಿಸಿದ್ದಾರೆ, ಜಿಲ್ಲಾಡಾಳಿತ ಟಗರು ಕಾಳಗವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಸಹ ಇದ್ಯಾವುದನ್ನು ಪರಿಗಣಿಸದೆ ಆದೇಶವನ್ನು ಉಲ್ಲಂಘಿಸಿ ಟಗರು ಕಾಳಗವನ್ನು ನಡೆಸಿರುವುದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿರುವುದು ತಮ್ಮ ಗಮನಕ್ಕೆ ಬಂದಿರಬಹುದು.
ಈ ಹಿಂದೆ 2019 ರಲ್ಲಿ ನವೆಂಬರ 22 ರಂದು ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಕಟ್ಟಿದ್ದ ಬ್ಯಾನರ್‍ಗಳನ್ನು ಹರಿದು ಹಾಕಿ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರ ದ್ವಿಚಕ್ರವಾಹನಗಳನ್ನು ಸುಟ್ಟುಹಾಕಿ ಕೊಡೇಕಲ್ ಗ್ರಾಮದದ್ಯಾಂತ ಮಾರಕಾಸ್ತ್ರಗಳನ್ನು ಹಿಡಿದು ಭಯದ ವಾತಾವರಣ ನಿರ್ಮಿಸಿದ ಕುರಿತು ವರಿಷ್ಠಾದಿಕಾರಿಗಳ ಕಚೇರಿಗೆ ಮತ್ತು ಉನ್ನತ ಅಧಿಕಾರಿಗಳ ಕಚೇರಿಗೆ ಆ ಸಂದರ್ಭದಲ್ಲಿ ಗಮನಕ್ಕೆ ತಂದಿರುತ್ತೇನೆ. ಹಾಗು ದಿನಾಂಕ:18.03.2021 ರಂದು ಕೊಡೇಕಲ್‍ನ ನಮ್ಮ ಪಕ್ಷದ ಕಾರ್ಯಕರ್ತರಾದ ಕನಕಪ್ಪ ಜಂಗಳಿ ಮತ್ತು ಇನ್ನೂ ಮೂರು ಜನರ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಘಟನೆ ಸೇರಿದಂತೆ ಈ ಎಲ್ಲಾ ಪ್ರಕರಣಗಳೂ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಹ ಆರೋಪಿತರ ಮೇಲೆ ಇಲ್ಲಿಯವರೆಗೂ ಯಾವುದೆ ಕಾನೂನು ಕ್ರಮ ಜರುಗಿಸದೆ ಇರುವುದು ವಿಷಾದನೀಯ ಸಂಗತಿ. ಕೊಡೇಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನಸಾಮಾನ್ಯರು ಸೇರಿದಂತೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ, ಹುಣಸಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಬಹಿರಂಗವಾಗಿ ಕೋಳಿ ಪಂದ್ಯ, ಮಟಕಾ, ಇಸ್ಪೀಟು ಹಾಗೂ ಇನ್ನಿತರ ಕಾನೂನು ಬಾಹಿರ ದಂಧೆಗಳು ನಡೆಯುತ್ತಿವೆ
ನನ್ನ ಮತಕ್ಷೇತ್ರದಲ್ಲಿ ಇಷ್ಟೆಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ನನ್ನ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆವೆಸಗುತ್ತಿರುವ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದು. ಪ್ರಕರಣಗಳನ್ನು ಭೇದಿಸಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.