ಕಾರ್ಯಕರ್ತರೊಡನೆ ಚರ್ಚಿಸಿ ನಿರ್ಧಾರ: ಲಕ್ಷ್ಮೀ ಇನಾಮದಾರ


ಚನ್ನಮ್ಮನ ಕಿತ್ತೂರ,ಏ.9: ನಲವತ್ತು ವರ್ಷಗಳಿಂದ ಕಿತ್ತೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದು ಮಾಜಿ ಸಚಿವ ಡಿ.ಬಿ. ಇನಾಮದಾರ ಅವರ ಕುಟುಂಬವನ್ನು ಗಣನೆಗೆ ತೆಗೆದುಕೊಳ್ಳದೇ ಕಾಂಗ್ರೇಸ್ ನಾಯಕರು ಕಡೆಗಣಿಸಿ ಬೇರೆಯವರಿಗೆ ಟಿಕೇಟ್ ನೀಡಿದ್ದು ಇದರ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಇನಾವiದಾರ ಕುಟುಂಬ ನಿರ್ಣಯ ಕೈಗೊಂಡಿದೆ ಎಂದು ಕಾಂಗ್ರೇಸ್ ಮುಖಂಡರಾದ ಲಕ್ಷ್ಮೀಇನಾಮದಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. 40 ವರ್ಷಗಳಿಂದ ಪಕ್ಷ ಉಳಿವಿಗಾಗಿ ಇನಾಮದಾರರವರು ಟೊಂಕ ಕಟ್ಟಿ ನಿಂತ್ತಿದ್ದಾರೆ. ಈಗ ಅವರು ಅನಾರೋಗ್ಯವಾಗಿರುವ ಸಮಯದಲ್ಲಿ ಕಾಂಗ್ರೆಸ್ ಅವರನ್ನು ಮತ್ತು ನಮ್ಮನ್ನು ಕೈಬಿಟ್ಟಿದ್ದು. ಇದರಿಂದ ನಮಗೆ ದೊಡ್ಡ ಆಘಾತವಾಗಿದೆ ಎಂದು ಭಾವುಕರಾದರು.
ರಾಜ್ಯ ನಾಯಕರಿಗೆ ಬೇಟಿಯಾದಾಗ ಮೊದಲನೇ ಹೆಸರಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದಾ ಟಿಕೇಟ್ ಮೊದಲ ಪಟ್ಟಿಯಲ್ಲಿ ಬರಲಿಲ್ಲಾ ಅವರ ಪರಿಸ್ಥಿತಿ ಎಲ್ಲ ನಾಯಕರ ಮುಂದೆ ಹೇಳಿ ನಮ್ಮನ್ನು ಸಹ ಟಿಕೇಟಿಗೆ ಪರಿಗಣನೆ ಮಾಡಿ ಎಂದು ಹೇಳಿದ್ದೇವೆ. ಅದಕ್ಕೆ ರಾಜ್ಯ ನಾಯಕರು ಸಮ್ಮತಿ ಸೂಚಿಸಿದ್ದರೆಂದರು.
ನಾವು ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧವಾಗಿದ್ದೆವೆ.É. ಏನೇ ನಿರ್ಧಾರ ಮಾಡಿದರೂ. ಕುಟುಂಬವರು ಮತ್ತು ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದೇವೆ. ಕಿತ್ತೂರಿನ ಮತದಾರರ ರಿಯಾಲಿಟಿಯೇ ಬೇರೆಯಿದೆ. ಆದರೆ ಹೈಕಮಾಂಡಿಗೇ ತೋರಿಸಿದ್ದೇ ಬೇರೆಯಿದೆ. ಶೀಘ್ರವೇ ಕಾರ್ಯಕರ್ತರ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಹೇಳಿದರು
ಕಾರ್ಯಕರ್ತರು ಹೇಳಿದರೆ ಬಂಡಾಯ ಸ್ಪರ್ಧೇ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ ಅದನ್ನುನಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ. ಸದ್ಯ ಡಿ.ಬಿ. ಇನಾಮದಾರವರನ್ನು ಹೊರತುಪಡಿಸಿ ನಮ್ಮ ಕುಟುಂಬದವರು ರಾಜೀನಾಮೆ ನೀಡುತ್ತೇವೆ.ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿಗೆ ಕಾಂಗ್ರೇಸ್ ಸದಸ್ಯತ್ವ ನೊಂದಣಿ ಮಾಡಿದ್ದೇವೆ. ಬೇಗನೇ ಎಲ್ಲರನ್ನು ಒಗ್ಗೂಡಿಸಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತವೆಂದರು.