ಕಾರ್ಯಕರ್ತರೇ ಪಕ್ಷದ ಆಸ್ತಿ:  ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ. ಜೂ.14; ಮಹಾನಗರ ಪಾಲಿಕೆಯ ಒಂದನೇ ವಾರ್ಡಿನಿಂದ ಐದನೇ ವಾರ್ಡಿನ ಪಕ್ಷದ ಸದಸ್ಯರು ವಾರ್ಡ್ ಅಧ್ಯಕ್ಷರು ಹಾಗೂ ಮುಖಂಡರ ಸಭೆಯನ್ನು  ತಮ್ಮ ಗೃಹ ಕಚೇರಿಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ನಡೆಸಿದರು.ಡಾ. ಶಾಮನೂರು ಶಿವಶಂಕರಪ್ಪನವರ ಗೆಲುವಿಗೆ ಶ್ರಮಿಸಿದ ಪಕ್ಷದ ವಾರ್ಡ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ ನಂತರ ಬೂತ್ ಮಟ್ಟದಲ್ಲಿ ಪಕ್ಷದ ಮತಗಳಿಗೆ ಬಗ್ಗೆ ಚರ್ಚೆ ನಡೆಸಿದರು ಮುಂದಿನ ಚುನಾವಣೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ವಾಗುವಂತೆ ಮತದಾರರನ್ನು ಪ್ರೇರೇಪಿಸಬೇಕು ಎಂದರು. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ನಮ್ಮ ಶಾಸಕರು ಈಡೇರಿಸುವರು ಎಂದು ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ವಿಶ್ವಾಸ ತುಂಬಿದರು.ಕಾರ್ಯಕರ್ತರೇ ಪಕ್ಷದ ಆಸ್ತಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖಂಡರಿಗೆ ಸಲಹೆ ನೀಡಿದರು ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕಬೀರ್ ಖಾನ್ ಮುಖಂಡರಾದ ಕೊಡಪನ ದಾದಾಪೀರ್, ಪ್ರವೀಣ್ ಕುಮಾರ್, ಹರೀಶ್ ಬಸಾಪುರ, ಗೀತಾ ಚಂದ್ರಶೇಖರ್, ಎಲ್.ಎಂ.ಸಾಗರ್, ಮೋಹನ್, ಬಾಬಾ ಜಾನ್ ಮಂಗಳಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.