ಕಾರ್ಯಕರ್ತರು ಜನರಲ್ಲಿ ಕೋವಿಡ್ ಜಾಗೃತಿ ಮೂಡಿಸಿ: ಮಾನೆ

ವಿಜಯಪುರ, ಏ.28-ಸರ್ಕಾರದ ನಿಯಮಗಳನ್ನು ಸರ್ವರೂ ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ನಿರ್ಮೂಲನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮನವಿ ಮಾಡಿದ್ದಾರೆ.
ನಗರದ ಆದಿಲ್‍ಶಾಹಿ ನಿರ್ಮಿತ ಶ್ರೀ ನರಸಿಂಹ ದೇವಸ್ಥಾನದಲ್ಲಿ ಕೊರೋನಾ ತಡೆಗಟ್ಟುವಂತೆ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಕೊರೋನಾ ಎರಡನೆಯ ಅಲೆ ಮಹಾಮಾರಿ ಭಯಾನಕ ರೋಗ ವಿಶ್ವವ್ಯಾಪಿ ಹರಡುತ್ತಿರುವದನ್ನು ತಡೆಗಟ್ಟುವಂತೆ ಸೃಷ್ಠಿಕರ್ತನಲ್ಲಿ ಪ್ರಾರ್ಥಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಕೊರೋನಾ ನಿರ್ಮೂಲನೆಗೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸಿ ಕೊರೋನಾದಿಂದ ನಿರ್ಗತಿಕರಿಗೆ, ಬಡವರಿಗೆ 14 ದಿನ ಜನತಾ ಕಫ್ರ್ಯೂ ಸರಕಾರದ ಆದೇಶವನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು. ಅಸಹಾಯಕರಿಗೆ ಉಳ್ಳವರು ಸಹಾಯ ಕಲ್ಪಿಸಬೇಕು. ಇಂತಹ ಪರಿಸ್ಥಿತಿಯಲ್ಲಿ 14 ದಿನಗಳಲ್ಲಿ ಹೆಚ್ಚು ದಿನಗಳನ್ನು ತಮ್ಮ ತಮ್ಮ ಗೃಹಗಳಲ್ಲಿ ಇರುವುದೇ ಕೊರೋನಾದಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಮನುಕುಲಕ್ಕೆ ಕಷ್ಟದ ಸಮಯ ಬಂದಿದೆ. ಎಲ್ಲರೂ ಮಾನವಿಯತೆ ಧರ್ಮ ಪಾಲಿಸಿ ಬೇರೆಯವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ ಮಾತನಾಡಿ ಪೋಲಿಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಏನೆಂದರೆ ಮಾಸ್ಕ ಇಲ್ಲದೆ ಪರದಾಡುವುದು ಮಾಸ್ಕ ಇಲ್ಲದವರಿಗೆ ಕೊರೋನಾ ಬಹುಬೇಗ ಪ್ರವೇಶಿಸುತ್ತದೆ ಹೀಗಾಗಿ ಜಿಲ್ಲಾಡಳಿತ ಮತ್ತು ಸರಕಾರದ ಕ್ರಮವನ್ನು ಪೋಲಿಸರು ಚಾಚುತಪ್ಪದೆ ಕಾರ್ಯನಿರ್ವಹಿಸಿ ತಪ್ಪಿತಸ್ಥರನ್ನು ದಂಡಿಸುವ ತಪ್ಪೆನಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಜನರು ಸರಕಾರದ ನಿಯಮವನ್ನು ಚಾಚುತಪ್ಪದೆ ಪಾಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕೃಷ್ಣಾಜಿ ಕುಲಕರ್ಣಿ, ಭಾರತೀಯ ದ್ರಾವೀಡ ಸೇನೆ ಅಧ್ಯಕ್ಷ ಮಹೇಶ ಅರಕೇರಿ ಮಾತನಾಡಿದರು. ರಮೇಶ ಚಲವಾದಿ, ಪರಮೇಶ ಪರಪ್ಪಗೋಳ, ಶರಣಗೌಡ ಬಿರಾದಾರ, ಯಲ್ಲಪ್ಪ ಮಾದರ, ಎ.ಪಿ. ಕುಲಕರ್ಣಿ, ಎಂ.ಐ. ಸುಲ್ತಾನಪುರ, ವಾಯ್.ಎ. ಗುಲಬರ್ಗಾ, ಬಸವರಾಜ ನಾಯಕ ಮತ್ತಿತರರು ಉಪಸ್ಥಿತರಿದ್ದರು.