ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ:ಲಿಂಬಾವಳಿ

ಕೆ.ಆರ್. ಪುರ,ಏ.೧- ಕೇಂದ್ರ, ರಾಜ್ಯ ಸರ್ಕಾರದ ಜನಪರ ಅಭಿವೃದ್ಧಿ ಕಾರ್ಯಗಳು, ನಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಬಂದಿರುವ ಎಲ್ಲಾ ಕಾರ್ಯಕರ್ತರಿಗೆ ಸೂಕ್ತಸ್ಥಾನಮಾನ ನೀಡಲಾಗುವುದೆಂದು ಶಾಸಕ ಅರವಿಂದ ಲಿಂಬಾವಳಿ ಅವರು ಹೇಳಿದರು.
ಮಹದೇವಪುರ ಕ್ಷೇತ್ರದ ವರ್ತೂರಿನ ವಹ್ನಿಕುಲ ಕ್ಷತ್ರಿಯ ತಿಗಳರ ಬೀದಿಯ ಯಜಮಾನ್ ಸಂಜೀವಪ್ಪ ಕುಟುಂಬದ ಅಶ್ವತಪ್ಪ ಹಾಗೂ ಅವರ ಕುಟುಂಬಗಳು ಸೇರಿದಂತೆ ವಹ್ನಿಕುಲ ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ನಮ್ಮ ಪಕ್ಷದ ಮೂಲ ಮಂತ್ರವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಧ್ಯೇಯದಂತೆ ಎಲ್ಲರನ್ನೂ ಮುನ್ನಡೆಸಿಕೊಂಡು ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ್ದೆವು ಇದೇ ನಮ್ಮ ಪಕ್ಷದ ವೈಶಿಷ್ಟ್ಯತೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕ್ಷೇತ್ರದಲ್ಲಿ ನಡೆದಿರುವ ಭರಪೂರ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಮಹದೇವಪುರ ಜನಹಿತ-೩ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ, ಈ ಪುಸ್ತಕವು ಕ್ಷೇತ್ರದ ಜನರಿಗೆ ನಾವು ನಡೆಸಿರುವ ಅಪಾರ ಜನೋಪಯೋಗಿ ಕೆಲಸಗಳ ಲೆಕ್ಕವನ್ನು ಜನರಿಗೆ ತಿಳಿಸಿದ್ದೆವೆ ಎಂದರು.
ಇದೇ ವೇಳೆ ಕಾಂಗ್ರೆಸ್ ಹಾಗೂ ಇತರೇ ಪಕ್ಷದ ೭೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾರೆಡ್ಡಿ, ಮಹೇಂದ್ರ ಮೋದಿ, ವರ್ತೂರು ಶ್ರೀಧರ್, ಎಲ್.ರಾಜೇಶ್, ಲೋಕೇಶ್, ನಾಗೇಶ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಕೆ.ಎಂ ಚಿಕ್ಕಣ್ಣ, ಎ.ರಘು, ಆರ್.ಸಿ ಬಾಬುರೆಡ್ಡಿ ಎನ್.ಉಮೇಶ್, ಎಂ.ಮೋಹನ್, ಸುಬ್ಬರಾವ್, ರಾಜಶೇಖರ್, ರಕ್ಷಿತ್ ಸೇರಿದಂತೆ ಹಲವಾರು ಹಾಜರಿದ್ದರು.