
ಬೀದರ,ಮೇ 14: 2019 ರಲ್ಲಿ 2ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದ ನಂತರ,ಬೀದರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ
ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಕಾಂಗ್ರೆಸ್ ಮುಕ್ತ ಬೀದರ
ಮಾಡಬೇಕೆಂದುಕೊಂಡು ಸತತ ಶ್ರಮ ಹಾಕಿ, ಕೆಲಸ ಮಾಡಿದ್ದೆ.
ಆದರೆ ಜಿಲ್ಲೆಯ ಜನತೆ 4 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಗೆಲ್ಲಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಎರಡುಕ್ಷೇತ್ರಗಳಲ್ಲಿಯೂ ಗೆಲ್ಲಲು ಎಲ್ಲಾ ರೀತಿಯ ಶ್ರಮಹಾಕುತ್ತೇನೆ. ಈ ಎರಡು ತಾಲೂಕಿನ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು.ಸಂಸದನಾಗಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗಾಗಿ ನಿಮ್ಮ ಜೊತೆ ನಾನು ನಿರಂತರ ಸಂಪರ್ಕದಲ್ಲಿ ಇರಲಿದ್ದೇನೆ ಎಂದು ಎಲ್ಲಾ ಕಾರ್ಯಕರ್ತರಿಗೆ ವಿಶ್ವಾಸ ನೀಡುತ್ತೇನೆ ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಅಭಯ ನೀಡಿದ್ದಾರೆ.