ಕಾರ್ಮಿಕ ಸಂಘ: ವಿಶ್ವ ಕಾರ್ಮಿಕರ ದಿನಾಚರಣೆ

ಬೀದರ್:ಮೇ.2: ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಇಲ್ಲಿಯ ನೌಬಾದ್‍ನ ಸಂಘದ ಕಚೇರಿಯಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ

ಎಂದು ಸಂಘದ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಹೇಳಿದರು.

ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪ್ರಮುಖರಾದ ಅಶೋಕ ವಗ್ಗೆ, ಸಂತೋಷ ಶಿಂದೆ, ಗೌತಮ ಮುತ್ತಂಗಿಕರ್, ಗೋಪಾಲ್ ಸಾಗರ್, ಪುಂಡಲೀಕ ಲಿಂಗದಳ್ಳಿಕರ್, ಕಂಟೆಪ್ಪ ಗುಪ್ತ, ರವಿ ಲಿಂಗದಳ್ಳಿಕರ್, ಸುರೇಶ ಚಾಂಬೋಳಕರ್ ಮತ್ತಿತರರು ಇದ್ದರು.