ಕಾರ್ಮಿಕ ವಿರೋಧಿ ನೀತಿ ವಿರುದ್ಧ ರಾಷ್ಷ್ರವ್ಯಾಪಿ ಸಾರ್ವತ್ರಿಕ ಮುಷ್ಕರ

ಮೈಸೂರು,ಅ.30: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ,ರೈತ ವಿರೋಧಿ ನೀತಿಗಳ ವಿರುದ್ದ ಪರ್ಯಾಯವಾಗಿ ಹಾಗೂ ಕೊವೀಡ್ ಪರಿಹಾರಕ್ಕಾಗಿ ಆಗ್ರಹಿಸಿ, ನವೆಂಬರ್ 26 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ರಾಷ್ಷ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ಆಫ್ ಇಂಎಇಯನ್ ಟ್ರೇಡ್ ಯೂನಿಯನ್(ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ಇಂದು ಬೆಳಗ್ಗೆ ಪತ್ರಿಕಾಗೋಷ್ಡಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರವು ಕಾಪೆರ್Çೀರೇಟ್ ಬಂಡವಾಳಗಾರರ ಪರ 29 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆಗಳನ್ನಾಗಿ ಸಂಸತ್ತಿನಲ್ಲಿ ಅಂಗೀಕರೀಸಿ ಶಾಸನ ರೂಪಿಸಿದೆ.ಸದರಿ ಅಂಶಗಳು ಹಲವಾರು ಕಾರ್ಮಿಕ ವಿರೋಧಿ ಅಂಶಗಳನ್ನು ಒಳಗೊಂಡಿದ್ದು, ಕಾರ್ಮಿಕರನ್ನು ಬಳಸಿ ಬಿಸಾಡಲು ಬಂಡವಾಳಗಾರರಿಗೆ ಮುಕ್ತ ಅವಕಾಶ ನೀಡಿದೆ ಎಂದು ಆರೋಪಿಸಿದರು.
ಮೇಲ್ಕಂಡ ನೀತಿಯಿಂದಾಗಿ ಈಗಾಗಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ.ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ.ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸುತ್ತಿರುವ ರೈತ ವಿರೋಧಿ ಶಾಸನಗಳಾದ ಭೂ- ಸುಧಾರಣೆ ಕಾಯ್ದೆ,ಎಪಿಎಂಸಿ ಕಾಯ್ದೆ ಅಗತ್ಯ ವಸ್ತುಗಳ ಕಾಯ್ದೆ ಗಳು ರೈತರನ್ನು,ಕೃಷಿಯನ್ನು ದಿವಾಳಿ ಮಾಡುವ ಶಾಸನಗಳಾಗಿವೆ ಎಂದ ಅವರು,ರಾಷ್ಟ್ರದ ಕೃಷಿ ವ್ಯವಸ್ಥೆಯನ್ನು ಕಾಪೆರ್Çೀರೇಟ್ ಬಹುರಾಷ್ಡ್ರೀಯ ಬಂಡವಾಳಕ್ಕೆ ಮುಕ್ತವಾಗಿ ತೆರೆದಿಡಲಿದೆ.ಈ ಎಲ್ಲ ನೀತಿಗಳ ವಿರುದ್ದ ಸದರಿ ಮುಷ್ಕರವನ್ನು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದೆ ಎಂದರು.
IಓಖಿUಅ,ಊಒS,ಚಿiಣuಛಿ,ಛಿiಣu,ಚಿiuಣuಛಿ,ಣuಛಿಛಿ,hmಞಠಿ,ಟಠಿಜಿ,ಜevಚಿ ಮತ್ತು ವಿವಿಧ ಸ್ವತಂತ್ರ ಫೆಡರೇಷನ್ ಗಳು ಜಂಟಿಯಾಗಿ ಅಕ್ಟೋಬರ್ 2ರಂದು ಹಮ್ಮಿಕೊಂಡಿದ್ದ ಆನ್ ಲೈನ್ ರಾಷ್ಟ್ರೀಯ ಸಮಾವೇಶದಲ್ಲಿ ನವೆಂಬರ್ 26ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು,ಬ್ಯಾಂಕ್,ವಿಮಾ ನೌಕರರ ಮತ್ತು ಸರ್ಕಾರಿ ನೌಕರತ ಫೆಡರೇಷನ್ ಗಳು ಸಹಾ ಈ ಮುಷ್ಕರಕ್ಕೆ ಬೆಂಬಲ ನೀಡಿ ಭಾಗವಹಿಸಲಿವೆ ಎಂದು ತಿಳಿಸಿದರು.
ಈ ಮಧ್ಯೆ ಸರ್ಕಾರಗಳ ವೈಫಲ್ಯದಿಂದ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು,ಸಾಮಾನ್ಯ ಜನತೆ ಸೂಕ್ತ ಚಿಕಿತ್ಶ ದೊರಕದೇ ಕೊವೀಡ್ ಗೆ ಬಲಿಯಾಗುತ್ತಿದ್ದಾರೆ..ಅಲ್ಲದೇ ಲಾಕ್ ಡೌನ್ ನಿಂದಾಗಿ ಹಲವು ಉದ್ದಿಮೆಗಳು ಸಂಕಷ್ಟದಲ್ಲಿವೆ.ಸಂಘಟಿತ ಕಾರ್ಮಿಕರು ಪೂರ್ಣ ಪ್ರಮಾಣದ ಲಾಕ್ ಡೌನ್ ಕಾಲಾವಧಿಯ ವೇತನ ಲಭಿಸದೇ ಪರದಾಡುತ್ತಿದ್ದಾರೆ ಎಂದ ಅವರು,ಇಂತಹ ಸಂದರ್ಭದಲ್ಲಿ ಸರ್ಕಾರಗಳು ನೆರವಿಗೆ ಬಾರದೇ ಕೇವಲ ನೆಪ ಮಾತ್ರದ ಹೇಳಿಕೆಗಳನ್ನು ನೀಡುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿವೆ ಎಂದು ಕಿಡಿಕಾರಿದರಲ್ಲದೇ,ಈ ಎಲ್ಲಾ ನೀತಿಗಳ ವಿರುದ್ದ ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ಲಾಕ್ ಡೌನ್ ಸಂಕಷ್ಡದಲ್ಲಿರುವ ಕುಟುಂಬಗಳಿಗೆ ಮಾಸಿಕ 7500 ರುಪಾಯಿ ನೇರ ನಗದು ವರ್ಗಾವಣೆಯನ್ನು ಮಾಡಬೇಕು.ತಲಾ ,10ಕೆಜಿ ಆಹಾರ ಧಾನ್ಯವನ್ನು ವಿತರಿಸಬೇಕು.ಸರ್ಕಾರಿ ನೌಕರರ ಬಲವಂತದ ನಿವೃತ್ತಿ ಯೋಜನೆ ಕೈ ಬಿಡಬೇಕು ಎಂಬಿತ್ಯಾದಿ 7ಅಂಶಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂದು ಮುಷ್ಕರ ನಡೆಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಡಿಯಲ್ಲಿ ಕೆ.ಎನ್ ಉಮೇಶ್,ಹೆಚ್.ಎಸ್.ಸುನಂದ,ಜಿ.ಜಯರಾಂ,ಬಾಲಾಜಿರಾವ್ ಉಪಸ್ಥಿತರಿದ್ದರು.