ಕಾರ್ಮಿಕ ವಿರೋಧಿ ಕಾಯ್ದೆ ಕೈಬಿಡಲು ಎಐಟಿಯುಸಿ ಸಮ್ಮೇಳನ ನಿರ್ಣಯ

ಕಲಬುರಗಿ,ಜ.12- ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಕಾರ್ಮಿಕ ವಿರೋಧಿ 4 ಕೋಡ್ ಕಾಯ್ದೆಗಳನ್ನು ಹಿಂಪಡೆದು ಮೊದಲಿನಂತೆ ಕಾರ್ಮಿಕ ಹಿತರಕ್ಷಣೆ ಕಾಪಾಡುವ ಕಾಯ್ದೆಗಳನ್ನು ಮುಂದುವರೆಸುವುದು ಸೇರಿದಂತೆ ವಿವಿಧಪ್ರಮುಖ ನಿರ್ಣಯಗಳನ್ನು ಎಐಟಿಯುಸಿ ಕಲಬುರಗಿಯ 7ನೇ ಜಿಲ್ಲಾ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ರೈತರ ಹೋರಾಟಕ್ಕೆ ಸಮ್ಮೇಳ ಬೆಂಬಲ ವ್ಯಕ್ತಪಡಿಸಿತು.
ಸಾರಿಗೆ ನೌಕರರ ವೇತನ ಸಕಾಲದಲ್ಲಿ ಪಾವತಿಸಲು ಹಾಗೂ ಕೂಡಲೆ ವೇತನ ಪರಿಷ್ಕರಣೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ನಿರ್ಣಯ. ಕಟ್ಟಡ ಕಾರ್ಮಿಕರಿಗೆ ಎ.ಎಸ್.ಐ ಜಾರಿಗೊಳಿಸಬೇಕು. ಮತ್ತು ಸಾಮಾಜಿಕ ಭದ್ರತೆ ಒದಗಿಸುವಂತೆ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.
ಟೇಲರ ಮತ್ತು ಸಹಾಯಕರ ಸಮಸ್ಯೆ ಬಗೆಹರಿಸಲು ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಟೇಲರ ಕಲ್ಯಾಣ ಮಂಡಳಿ ಕೂಡಾ ರಚನೆ ಮಾಡುವಂತೆ ಒತ್ತಾಯ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಚ್ಚಿರುವ ಸಿಮೆಂಟ್ ಕೈಗಾರಿಕೆಗಳನ್ನು ಪುನಃಚೇತನಗೊಳಿಸಲು ಒತ್ತಾಯ. ಕಲಬುರಗಿ ನಗರದಲ್ಲಿ ಪ್ರಮುಖ ಜನಸಂದಣಿ ಇರುವ ಸ್ಥಳಗಳಲ್ಲಿ ಆಟೋಗಳಿಗಾಗಿ ಆಟೋ ಸ್ಟ್ಯಾಡ ನಿರ್ಮಿಸಬೇಕೆಂದು ಮತ್ತು ಆಟೋ ಚಾಲಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯ.
ಬ್ಯಾಂಕ ನೌಕರರು ದೇಶದ ಆರ್ಥಿಕ ಭದ್ರತೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಉಳವಿಗಾಗಿ ನಡೆಸುತ್ತಿರುವ ಹೋರಾಟಗಳಿಗೆ ಎಐಟಿಯುಸಿಯಿಂದ ಬೆಂಬಲಿಸಲು ನಿರ್ಣಯಿಸಲಾಯಿತು. ಹಲವಾರು ವರ್ಷಗಳಿಂದ ರೇಣುಕಾ ಸುಗರ್ಸ್ ಮಳ್ಳಿ ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ ಕಾರ್ಮಿಕರಿಗೆ ಖಾಯಂಗೊಳಿಸಬೇಕು. ಮತ್ತು ವಿವಿಧ ರಂಗದಲ್ಲಿ ದಿನಗೂಲಿ ಕಾರ್ಮಿಕರು, ಮ್ಯಾನಪಾವರ ಏಜೆನ್ಸಿ ಮೂಲಕ ಇರುವ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿ ಸಮಾಜಿಕ ಭದ್ರತೆಯೊಂದಿಗೆ ಅವರೆಲ್ಲರ ಕೆಲಸ ಖಾಯಂಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಸಂಘಟಿತ, ಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ಪಿ.ಎಫ್/ ಇ.ಎಸ್.ಐ ಹಾಗೂ ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ನಿರ್ಣಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರತಿಭಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ರೈಲ್ವೆ, ಬ್ಯಾಂಕ ಮತ್ತು ಬಿ.ಎಸ್.ಎನ್.ಎಲ್, ಎಲ್‍ಐಸಿ, ವಿಮಾನ ನಿಲ್ದಾಣಗಳು ಹಾಗೂ ಇನ್ನಿತರ ಸರಕಾರಿ ಸೌಮ್ಯದಲ್ಲಿರುವ ಕಾರ್ಖಾನೆ ಮತ್ತು ಉದ್ದಿಮೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಖಾಸಗಿಕರಣಗೊಳಿಸುತ್ತಿರುವದನ್ನು ಕೈಬಿಟ್ಟು ಸರಕಾರಿ ಸೌಮ್ಯದಲ್ಲಿ ಮುಂದುವರೆಸಬೇಕೆಂದು ಸಮ್ಮೇಳನ ಒತ್ತಾಯಿಸಿತು.
ಎಐಟಿಯುಸಿ 7ನೇ ಕಲಬುರಗಿ ಜಿಲ್ಲಾ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಚ್.ಎಸ್. ಪತಕಿ ಉಪಾಧ್ಯಕ್ಷರಾಗಿ ಬಕ್ಕಪ್ಪ ಅಮಲೆ, Àರಣಬಸಯ್ಯ, ಸ್ಯಾಮಸನ್ ಐ ರೆಡ್ಡಿ, ಮಾನಪ್ಪ ಕಟ್ಟಿಮನಿ ಇಜೇರಿ,
ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಕಾರ್ಯದರ್ಶಿ ಚಂದ್ರಮೋಹನ, ಶಿವಲಿಂಗಮ್ಮ ಲೆಂಗಟಿಕರ್, ಹಣಮಂತರಾಯ ಅಟ್ಟೂರ, ಕಲ್ಯಾಣಿ ತುಕ್ಕಾಣಿ, ಖಜಾಂಚಿ ಸಿದ್ದಪ್ಪ ಪಾಲ್ಕಿ, ಹಾಗೂ 17 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸಮ್ಮೇಳನ ಆಯ್ಕೆ ಮಾಡಲಾಗಿದೆ. ಒಟ್ಟು 28 ಜನ ಒಳಗೊಂಡ ಜಿಲ್ಲಾ ಮಂಡಳಿ ಈ ಸಮ್ಮೇಳನ ಆಯ್ಕೆಗೊಳಿಸಿದೆ
ಪ್ರಭುದೇವ ಯಳಸಂಗಿ ಎಚ್.ಎಸ್.ಪತಕಿ ಹಣಮಂತರಾಯ ಅಟ್ಟೂರ
ಎಐಟಿಯುಸಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು ಭಾಗವಹಿಸಿದ್ದರು.