ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ರಾಯಚೂರು, ಆ.೦೯- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಗಳ ಜಿಲ್ಲಾ ಜಂಟಿ ಸಮತಿ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರಕಾರ ಕಾರ್ಮಿಕರ ಮತ್ತು ರೈತರ ವಿರುದ್ಧವಾಗಿ ನಡೆದುಕೊಂಡಿದೆ ಆಕ್ರೋಶ ವ್ಯಕ್ತಪಡಿದರು.
ಕೇಂದ್ರದ ೯ ವರ್ಷಗಳ ಬಿಜೆಪಿ ಸರ್ಕಾರದ ಕಡೆ ತಿರುಗಿ ನೋಡಿದರೆ ಜನ ಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಮಾರಣಾಂತಿಕ ದಳಿಯನ್ನು ಎಸಗಿರುವುದು ನಮಗಿಂದು ವೇದ್ಯವಾಗುತ್ತಿದೆ. ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆ ನೀಡಿದೆ, ಕೇಂದ್ರದ, ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಕಾರ್ಮಿಕರ ದುಡಿತದ ಅವಧಿಯನ್ನು ದಿನಕ್ಕೆ ೧೨ ಗಂಟೆಗೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು.
ಜೀವನ ಯೋಗ್ಯ ಕನಿಷ್ಠ ವೇತನ ರೂ. ೩೧೫೦೦ ಗಳಿಗೆ ಹೆಚ್ಚಳ ಮಾಡಬೇಕು.
ಕಾರ್ಮಿಕ ವಿರೋಧಿ ಲೇಬರ್ ಕೋಡನ್ನು ರದ್ದುಪಡಿಸಬೇಕು.
ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕನಿಷ್ಠ ರೂ. ೮ ಸಾವಿರ ಪಿಂಚಣಿ ನೀಡಬೇಕು, ಸಾರ್ವಜನಿಕ ಉದ್ದಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು.
ಉದ್ಯೋಗ ಖಾತ್ರಿ ಯೋಜನೆಯ ದುಡಿತದ ದಿನಗಳನ್ನು ರೂ. ೨೦೦ ಗೆ ಹೆಚ್ಚಳ ಮಾಡಬೇಕು.
ಸ್ಕಿಮ್ ಕಾರ್ಮಿಕರಾದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು.
ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ ಜಿ.ಎಸ್.ಟಿ, ವ್ಯಾಪ್ತಿಯಿಂದ ಹೊರಗಿಡಬೇಕು.
ವಿದ್ಯುಚ್ಛಕ್ತಿ ಮಸೂದೆ ೨೦೦ ನ್ನು ಹಿಂಪಡೆಯಬೇಕು.
ಈ ಸಂದರ್ಭದಲ್ಲಿ ಕೆ. ಜಿ ವಿರೇಶ, ಡಿ. ಎಸ್ ಶರಣಬಸವ, ಹೆಚ್ ಪದ್ಮಾ ಸೇರಿದಂತೆ ಉಪಸ್ಥಿತರಿದ್ದರು.