ಕಾರ್ಮಿಕ ಭವನ ಕಟ್ಟಡ ಸ್ಥಳಕ್ಕೆ ಸಚಿವರ ಭೇಟಿ


ಮುಂಡಗೋಡ,ಮೇ.3: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಸಿಟಿ ಪಾರ್ಮ್ ಹತ್ತಿರ ಕಾರ್ಮಿಕ ಭವನ ಕಟ್ಟಡ ಜಾಗ ಮಂಜೂರಿಯಾದ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳಿಯಾಳದ ಬಿಜೆಪಿ ಮುಂಖಡ ನನ್ನ ಸ್ನೇಹಿತ ರಾಜು ದೂಳಿ ಕೋವಿಡ್ ಸೋಂಕಿನಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಪಕ್ಷ ಹಾಗೂ ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ. ರಾಜಕಾರಣಕ್ಕಿಂತ ವೈಯಕ್ತಿಕ ಜೀವನದ ಸ್ನೇಹ ಬಹುದೊಡ್ಡದು. ಅವರು ಬಿಜಿಪಿಯ ಹಿರಿಯ ಮುಖಂಡರಾಗಿದ್ದರು ಹಳಿಯಾಳದಲ್ಲಿ ಬಹಳ ವರ್ಷದಿಂದ ತಳಮಟ್ಟದಿಂದ ಪಕ್ಷ ಸಂಘಟಿಸಿದ್ದರು. ಆ ಕುಟಂಬದ ವರ್ಗದವರಿಗೆ ಅಗಲಿಕೆಯ ದುಖ:ವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.
ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ತಾಲೂಕು ಬಿಜೆಪಿ ಅಧ್ಯಕ್ಷ ನಾಗಭೂಷಣ ಹಾವಣಗಿ, ಬಿಜೆಪಿ ಮುಖಂಡರಾದ ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರು, ದೇವು ಪಾಟೀಲ, ತಹಶೀಲ್ದಾರ ಶ್ರೀಧರ ಮುಂದಲಮನಿ, ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯಾ ಉಪಸ್ಥಿತರಿದ್ದರು.