ಕಾರ್ಮಿಕ ಪರವಾದ ನೀತಿ ಜಾರಿಗೆ ತರುವ ಸರ್ಕಾರ ರಚನೆಗೆ ಸಿಐಟಿಯು ಬೆಂಬಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.26: ಕಾರ್ಮಿಕ ವಿರೋಧಿ, ಕೋಮುವಾದಿ ಬಿಜೆಪಿ‌ಪಕ್ಷ ಸೋಲಿಸಲು ನಮ್ಮ ಸಂಘಟನೆ ಕಾರ್ಮಿಕರಿಗೆ ಕರೆ ನೀಡುತ್ತದೆಂದು ಸಿಐಟಿಯುನ ಮುಖಂಡ ಜೆ.ಸತ್ಯಬಾಬು ಹೇಳಿದ್ದಾರೆ.
ಅವರು ಇಂದು ನಗರದ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಬಜೆಪಿ ಸರ್ಕಾರ, ದಿನಕ್ಕೆ 12 ತಾಸು ಉದ್ಯೋಗ, ಮಹಿಳೆಯರಿಗೆ ರಾತ್ರಿ ವೇಳೆ ಕರ್ತವ್ಯ,  ಗುತ್ತಿಗೆ ಆಧಾರಿತ ನೌಕರರನ್ನು ಖಾಯಂಗೊಳಿಸದೇ ಇರುವುದರಿಂದ ಆ ಪಕ್ಷವನ್ನು ಸೋಲಿಸುವುದು ಸಿಐಟಿಯು ಕಾರ್ಮಿಕ ಸಂಘಟನೆಯ ಗುರಿ ಆಗಿದೆ.
ಬಳ್ಳಾರಿ‌ ಜಿಲ್ಲೆಯಲ್ಲಿ  ಕಾಂಗ್ರೆಸ್ ನ್ನು ಬೆಂಲಿಸಲಿದೆ. ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯದ  ಕಾಂಗ್ರೆಸ್ ಗೆ ಬಹುತೇಖ ಕಡೆ, ಇನ್ನು ಕೆಲ ಕಡೆಗಳಲ್ಲಿ ಜೆಡಿಎಸ್ ಇಲ್ಲವೇ  ಇತರೇ ಅಭ್ಯರ್ಥಿಗೆ ಬೆಂಬಲ ನೀಡಲಿದೆಂದು  ಹೇಳಿದ್ದಾರೆ.
ಚುನಾವಣೆಯ ಹಿನ್ನಲೆಯಲ್ಲಿ ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಮುಖಂಡರಾದ ಚಂದ್ರಕುಮಾರಿ,  ತಿಪ್ಪೆಸ್ವಾಮಿ, ಚನ್ನಬಸಯ್ಯ ಇದ್ದರು.