
ಬೀದರ್:ಮೇ.2: ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳದ ಸ್ವಧಾರ ಕೇಂದ್ರದಲ್ಲಿ ನಿನ್ನೆ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಧಾರ ಕೇಂದ್ರದ ಫಲಾನುಭವಿ ಕು, ನಿಕಿತಾ ಅವರು ಕಾರ್ಮಿಕರು ಹಾಗೂ ಮಾಲೀಕರ ನಡುವೆ ನಡೆದ ಸಂಘರ್ಷ ಹಾಗೂ ಕೈಗಾರಿಕೀಕರಣ ನಂತರದ ಕಾರ್ಮಿಕರ ಹಕ್ಕುಗಳು: ಹಾಗೂ ಬೇಡಿಕೆಗಳ ಬಗ್ಗೆ ಸುಧೀರ್ಗವಾಗಿ ಮಾತನಾಡಿದರು.
ನಂತರ ತೃಪ್ತಿ ಅವರು ಉತ್ಪಾದನೆ ಹೆಚ್ಚಳದ ಬಗ್ಗೆ ಮಾತನಾಡಿದರು. ವೇದಿಕೆಯ ಮೇಲೆ ಸ್ವಧಾರ ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಕು. ಪೂಜಾ ಅವರಿಂದ ನೆರವೇರಿತು.