
ಬೀದರ:ಮೇ.2: ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಕಟ್ಟಡ ಗಿಲಾವಾ ಗುತ್ತೆದಾರ ಸಂಘದಿಂದ ಡಾ. ಬಿ.ಆರ್ ಅಂಬೇಡ್ಕರ್ ಪತ್ತಳಿಗೆ ಮಾಲಾರ್ಪಣೆ ಹಾಗೂ ಸಿಹಿ ಹಂಚುವ ಮೂಲಕ ಕಾರ್ಮಿಕ ದಿನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಟ್ಟಡ ಗಿಲಾವಾ ಗುತ್ತೆದಾರ ಸಂಘದ ಅಧ್ಯಕ್ಷರಾದ ಸಂಜುಕುಮಾರ ಶಿಂಧೆ, ಸ್ವಾಮಿದಾಸ ದೊಡ್ಡಿ, ತುಕಾರಾಮ ಬಸಂತಪೂರ, ನರಸಿಂಗ ಅಮಲಾಪೂರ, ಭಿಮರಾವ ಮಿರಾಗಂಜ, ಅಶೋಕ,ಅರುಣ ಡಾಂಗೆ, ಶಿವಕುಮಾರ ಅಮಲಾಪೂರ ಸೇರಿದಂತೆ ಅನೇಕ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.