ಕಾರ್ಮಿಕ ದಿನಾಚರಣೆ ಮನೆಯಂಗಳದಲ್ಲಿ ಶ್ರಮಿಕನಿಗೆ ನಮನ.

ಹೊಸಪೇಟೆ ಮೇ2: ಮಹಾಮಾರಿ ಕೊರೊನಾ ಸಂಕಷ್ಟದ ನಡುವೆಯೂ ನಗರದ ಕಾರ್ಮಿಕ ಮುಖಂಡರ ಮನೆಂಗಳದಲ್ಲಿ ಕಾರ್ಮಿಕ ದಿನಾಚರಣೆಯ ಮೂಲಕ ನಾಡಿನ ಶ್ರಮಕ ವರ್ಗಕ್ಕೆ ಗೌರವ ಸಲ್ಲಿಸಿದರು.
ಕೊರೊನಾ ಹಿನ್ನಲೆಯಲ್ಲಿ ಮನೆ, ಮನೆಗಳಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲು ಕರೆ ನೀಡಿದ್ದರಿಂದ ಸಿಪಿಐಎಂ ಮುಖಂಡ ಎ ಕರುಣಾನಿಧಿ ತಮ್ಮ ನಿವಾಸದಲ್ಲಿ ಕೆಂಪು ಭಾವಟವನ್ನು ಪ್ರದರ್ಶನ ಮಾಡುವ ಮೂಲಕ ಸರಳವಾಗಿ ಕಾರ್ಮಿಕ ದಿನಾಚರಣೆ ಆಚರಿಸಿ ದುಡಿಯುವ ವರ್ಗಕ್ಕೆ ಕಾರ್ಮಿಕ ದಿನಾಚರಣೆಯ ಶುಭ ಕೋರಿದರು. .
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರು ತಪ್ಪದೇ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಅನಗತ್ಯವಾಗಿ ತಿರುಗಾಡಿ ಆರೋಗ್ಯ ತೊಂದರೆಗೀಡಾಗಬಾರದು. ಈ ಸಂದರ್ಭದಲ್ಲಿ ಸರ್ಕಾರ ಎಲ್ಲಾರಿಗೂ ಉಚಿತ ಲಸಿಕೆ ನೀಡುವುದು ಸೇರಿದಂತೆ ರೋಗಿಗಳಿಗೆ ಉಚಿತ ಆಮ್ಲಜನಕ, ಹಾಸಿಗೆ ವ್ಯವಸ್ಥೆಗಲ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಜನತಾ ಕಪ್ರ್ಯೂ ಹಿನ್ನಲೆಯಲ್ಲಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ ಮಾಸಿಕ 10 ಸಾವಿರ ರೂ ನೇರ ನಗದು ವರ್ಗಾವಣೆ ಮಾಡಬೇಕು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತದೆ. ಕಾಳಸಂತೆಕೋರರು ಇದರ ದುರ್ಲಾಭ ಪಡೆಯಲು ಮುಂದಾಗಿ ಬಡವರು ಬಲಿಪಶುಗಳಾಗುತ್ತಾರೆ. ಆದ್ದರಿಂದ ಸರ್ಕಾರ ಜನತಾ ಕಪ್ರ್ಯೂ ಹಿಂದಕ್ಕೆ ಪಡೆಯಬೇಕು. ಜನರಲ್ಲಿ ಆತ್ಮಸ್ಥೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ ಮಾಡುವ ಮೂಲಕ ಕೊರೊನಾ ಹಿಮ್ಮೆಟ್ಟಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.