
ವಿಜಯಪುರ:ಮೇ.3: ಮನು ಸಾಮಾಜಿಕ ಜನಜಾಗೃತ ವಿವಿದೋದ್ಧೇಶ ಸಂಸ್ಥೆ ಮತ್ತು ಕನ್ನಡ ಪುಸ್ತಕ ಪರಿಷತ್ ವತಿಯಿಂದ ಮೇ -1 ಕಾರ್ಮಿಕರ ದಿನಾಚರಣೆಯ ಅಂಗವಾಗಿ ಎ.ಪಿ.ಎಂ.ಸಿಯಲ್ಲಿ ಕೂಲಿ ಕಾರ್ಮಿಕರಾದ ಹಮಾಲ ರನ್ನು ಅವರಿದ್ದಲ್ಲಿಗೆ ಹೋಗಿ ಸನ್ಮಾನಿಸಿ ಗೌರವಿಸಲಾಯಿತು.
ಮೆ-1ನ್ನು ನಾಡು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸುತ್ತದೆ. ಇಂದಿನ ದುಬಾರಿಕಾಲದಲ್ಲಿ ಹಗಲಿರುಳೆನ್ನದೆ ಬೆವರುಸುರಿಸುವ ಕೂಲಿ ಕಾರ್ಮಿಕರನ್ನು ಈ ದಿನಾಚರಣೆಯ ಮೂಲಕ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಮನು ಸಾಮಾಜಿಕ ಜನಜಾಗೃತಿ ವಿವಿದೋದ್ಧೇಶ ಸಂಸ್ಥೆ ಮತ್ತು ಕನ್ನಡ ಪುಸ್ತಕ ಪರಿಷತ್ತು, ಶ್ರಮಜೀವಿ ಕಾರ್ಮಿಕರು ಇರುವ ವಿಜಯಪುರದ ಎ.ಪಿ.ಎಂ.ಸಿ.ಯ ಅಡತಿ ಅಂಗಡಿಗಳಲ್ಲಿ ಹಮಾಲಿ ಮಾಡುವ ಕಾರ್ಮಿಕರಾದ ಚಂದ್ರಾಮ ಬೂದಿಹಾಳ, ಭೀಮಪ್ಪ ಮರನೂರ, ಪರಸಪ್ಪಾ ಮರನೂರ, ಮಹಾಂತೇಶ ಇಳಕಲ್ ಇವರಿಗೆ ಸನ್ಮಾನಿಸಿ ಸಿಹಿತಿನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಪ್ರೀತಿ.ಪತ್ತಾರ, ಎಂ.ಬಿ.ಕಟ್ಟಿಮನಿ, ಸಿದ್ರಾಮ ಬಿರಾದಾರ, ಭೀಮಾಶಂಕರ ಕುಂಬಾರ , ಡಿ.ಜೋತಫ್, ಮಲ್ಲಿಕಾರ್ಜುನ ವಾಲಿ, ಕನ್ನಡ ಪುಸ್ತಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಬೈಚಬಾಳ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ನಮ್ಮ ದೇಶದ ಮೂಲ ಆಧಾರಸ್ತಂಭ ಈ ಕಾರ್ಮಿಕರು ಇವರು ಯಾರಿಂದಲೂ ಏನನ್ನು ಬಯಸದ ಇವರನ್ನು ಇಂತಹ ಮಹತ್ವದ ದಿನ ಅವರಿದ್ದಲ್ಲಿಗೆ ಬಂದು ಗೌರವಿಸಿದ್ದು ನಿಜವಾದ ಕಾರ್ಮಿಕರ ದಿನಾಚರಣೆ ಎಂದು ಮಾತನಾಡಿ ವಂದಿಸಿದರು.