ಕಾರ್ಮಿಕ, ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಜ.೫- ದೇಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರವಾದ ಕರಾಳ ಕೃಷಿ ಕಾನೂನನ್ನು ಕೂಡಲೇ ಹಿಂಪಡೆಯುವಂತೆ ಎ.ಐ.ಯು.ಟಿ.ಯು.ಸಿ ಕೃಷಿ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕರಾಳ ಕಾಯ್ದೆಗಳ ಪತ್ರ ದಹಿಸಿ ಪ್ರತಿಭಟಿಸಿತು.
ಅವರಿಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿನೆ ನಡೆಸಿ ಕೇಂದ್ರ ಸರ್ಕಾರವು ಕೃಷಿ ಮತ್ತು ಕಾರ್ಮಿಕರಿಗೆ ವಿರುದ್ಧವಾದ ಕರಾಳ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, ಇದರಿಂದ ದೇಶದ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ಲಕ್ಷಾಂತರ ರೈತರು ಹೋರಾಟ ಮಾಡುತ್ತಿದ್ದು, ಸಂಘಟನೆಯ ಸಂಪೂರ್ಣ ಬೆಂಬವಿದೆ. ಹಾಗೂ ಕರಾಳ ಕಾಯ್ದೆಗಳನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿಯ ಎನ್.ಎಸ್ ವಿರೇಶ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.