
ಕಲಬುರಗಿ:ಜು.12: ಎಲ್ಲಾ ವಿದ್ಯಾರ್ಥಿ ವರ್ಗದವರು ಕಾರ್ಮಿಕ ಇಲಾಖೆಯಿಂದ ಸಿಗುವ ಸಕಲ ಸರ್ಕಾರಿ ಸೌಲಭ್ಯವನ್ನು ಉಚಿತವಾಗಿ ಪಡೆಯಬೇಕು ಇದನ್ನು ತಮ್ಮ ಪೋಷಕರಿಗೆ ತಿಳಿಹೇಳಬೇಕೆಂದು ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ ಅವರು ಸಲಹೆ ನೀಡಿದರು.
ಅವರು ನಗರದ ಪ್ರೀಮಿಯರ್ ಸ್ಪಿನ್ನಿಂಗ್ ವೀವಿಂಗ್ ಮಿಲ್ಸ್ ಪೈವೇಟ್ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಉಚಿತ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗದವರಿಗೆ ಉಚಿತವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ವಿದ್ಯಾಭ್ಯಾಸ, ಆರೋಗ್ಯ, ಮದುವೆ, ಆಪಘಾತ ವಿಮೆ, ಕಟ್ಟಡ ದುರಂತ ವಿಮೆ ಸೇರಿದಂತೆ ಹತ್ತು ಹಲವಾರು ಯೋಜನೆಗಳು ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿರುತ್ತದೆ. ಇದರಿಂದ ಯಾವ ಬಡ ಕಾರ್ಮಿಕ ಕುಟುಂಬ ಅವಕಾಶ ವಂಚಿತರಾಗಬಾರದು. ಯಾವುದೇ ಮಾಹಿತಿಗಾಗಿ ವಿದ್ಯಾರ್ಥಿಗಳು ನೇರವಾಗಿ ತಮ್ಮನ್ನು ಸಂರ್ಪಕಿಸಬೇಕು ಮಧ್ಯವರ್ತಿಗಳ ಮಾತಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು. ಮಾಧ್ಯಮದ ಸೇರಿದಂತೆ ಸಂಘ ಸಂಸ್ಥೆಗಳು ಕಾರ್ಮಿಕರಿಗೆ ಅನುಕೂಲವಾಗುವಂತಹ ಮಾಹಿತಿಯನ್ನು ಪ್ರಕಟಿಸಬೇಕೆಂದು ಕೋರಿದರು
ವೇದಿಕೆ ಮೇಲೆ ಮುಖಂಡರಾದ ಮಲ್ಲೇಶಿ ಸಜ್ಜನ್, ಶಿವಪುತ್ರ ಹಾಗರಗಿ, ಸುದ್ದಿವಾಣಿ ಪತ್ರಿಕೆ ಸಂಪಾದಕರಾದ ಚಿದಾನಂದ ರೂಲೆ, ಮಲ್ಲಿಕಾರ್ಜುನ್ ಹುದ್ದಾರ್, ತಿಪ್ಪಣ್ಣ ಮೌರ್ಯ, ಭಾರತ ಫೈನಾನ್ಸ್‍ನ ಹೆಚ್,ಆರ್,ಶಿವಯೋಗಿ ಸೇರಿದಂತೆ ಅನೇಕ ಮಹಿಳಾ ಅಭ್ಯರ್ಥಿಗಳು, ಮಹಿಳೆಯರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು.