ಕಾರ್ಮಿಕ ಕಲ್ಯಾಣ ಯೋಜನೆಗಳ ಜಾಗೃತಿ ಕಾರ್ಯಕ್ರಮ

ರಾಯಚೂರು.ಏ.೪.ಇತ್ತೀಚಿಗೆ ನಗರದ ಅಂಬೇಡ್ಕರ್ ವೃತ್ತದ ಅತ್ತಿರ ಇರುವ ಮನೋರಂಜನ್ ಕೇಂದ್ರದಲ್ಲಿ ಅಸಂಘಟಿತ ವಲಯ ಕಾರ್ಮಿಕ ಕಲ್ಯಾಣ ಯೋಜನೆಗಳ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ನಜಿಯಾ ಸುಲ್ತಾನ್ ಅವರು ಉದ್ಘಾಟಿಸಿದರು.
ಸಿಟಿ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣ ಯೋಜನೆಗಳ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ಎಲ್ಲಾ ಯೋಜನೆಗಳು ಮತ್ತು ಪ್ರಯೋಜನಗಳನ್ನು ಅಗಾಧವಾಗಿ ವಿವರಿಸಿ ಅಸಂಘಟಿತ ವಲಯದ ಕಾರ್ಯಪಡೆಯ ಅಡಿಯಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಈ ಸಂದರ್ಭದಲ್ಲಿಅಧ್ಯಕ್ಷರಾದ ಮೊಹಮ್ಮದ್ ಫಿರೋಜ್ ಹಮ್ರಾಜ್,ಜಿಮೀ ಸಲೀಮ್ ಪಾಷಾ, ಮೊಹಮ್ಮದ್ ಲಯಸ್,ಸೈಯದ್ ಅಮಾನುಲ್ಲಾ,ಮಹೇಶ್ ಕುಮಾರ್,ಮೊಹಮ್ಮದ್ ಸಾದಿಕ್,ಮೊಹಮ್ಮದ್ ಮಸ್ತಾನ್,ಮೊಹಮ್ಮದ್ ಸಲೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.