ಕಾರ್ಮಿಕ ಕಲ್ಯಾಣ ಘಟಕ ಉದ್ಘಾಟನೆ

ಬಂಕಾಪುರ, ಜ 14- ಶಿಗ್ಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತಿ ವೇದಿಕೆಯ ಅಸಂಘಟಿತ ವರ್ಗಗಳ ಕಾರ್ಮಿಕರ ಕಲ್ಯಾಣ ಘಟಕದ ಉದ್ಘಾಟನೆ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮನಿಪ್ರ ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ, ಶಿಗ್ಗಾಂವ, ಶ್ರೀ ಹಜರತ ಸಯ್ಯದಶಾ ಮೊಹ್ಮದಖುತಬೇ ಆಲಮ್ ಖಾದ್ರಿ ಬಂಕಾಪುರ ವಹಿಸಿದ್ದರು.
ಕಾರ್ಯಕ್ರಮವನ್ನು ಗೃಹ ಸಚಿವ ಬಸವರಾಜ ಎಸ್ ಬೊಮ್ಮಾಯಿ ಉದ್ಘಾಟಿಸಿದರು. ರಾಜ್ಯಾಧ್ಯಕ್ಷರಾದ ಫಕ್ಕೀರೇಶ ಶಿಗ್ಗಾವಿ , ಗೌರವಾನ್ವಿತ ಅತಿಥಿಗಳಾದ ಡಿ. ಎಸ್. ಓಲೇಕಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಬೊಮ್ಮಾಯಿ, ಪ್ರತಿಯೊಬ್ಬ ಕಾರ್ಮಿಕರಿಗೂ ತಮ್ಮದೆಯಾದ ಅನುಕ್ರಮ ಸಂಖ್ಯೆಯನ್ನು ಸರಕಾರದಿಂದ ಕೊಡುತ್ತೇವೆ ಮತ್ತು 2019-20 ನೇ ಸಾಲಿನ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶಿಪ್ ನೀಡಲಾಗುವುದು ಎಂದರು. ಬಂಕಾಪುರ ಘಟಕದ ಅಧ್ಯಕ್ಷರಾದ ಮಹ್ಮದ ಅಲಿ ಹೈದರಾಬಾದಿ, ಉಪಾಧ್ಯಕ್ಷರಾದ ತೌಶಿಪ್ ಆಹ್ಮದ ಲಾಲನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.