ಕಾರ್ಮಿಕ ಇಲಾಖೆ ನಿರೀಕ್ಷಕಿ ` ಲೋಕಾ’ ಬಲೆಗೆ


ಹಾವೇರಿ,ಜು.2: ಕಾರ್ಮಿಕ ಇಲಾಖೆಯ ಕಾರ್ಡ್ ಮಾಡಿ ಕೊಡಲು ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರಾಣೆಬೆನ್ನೂರಿನ ಕಾರ್ಮಿಕ ಇಲಾಖೆಯ ನಿರೀಕ್ಷಕಿ ಮಮ್ತಾಜ್ ಬೇಗಂ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕಾರ್ಮಿಕರಿಗೆ ಕಾರ್ಡ್ ಮಾಡಿ ಕೊಡಲು ನಾರಾಯಣಪ್ಪ ಭರಮಪ್ಪ ಅಂತರವಳ್ಳಿ ಅವರಿಗೆ ಮೂರು ಸಾವಿರ ರೂಗಳ ಬೇಡಿಕೆಯನ್ನು ಇಟ್ಟಿದ್ದ ಬಗ್ಗೆ ಲಿಖಿತ ದೂರಿನನ್ವಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಿದ ಸಿಪಿಐ ಆಂಜನೇಯ ಅವರ ನೇತೃತ್ವದ ಲೋಕಾಯುಕ್ತ ಪೆÇಲೀಸರು ಕಾರ್ಮಿಕ ಇಲಾಖೆಯ ನಿರೀಕ್ಷಕಿ ಮಮ್ತಾಜ್ ಬೇಗಂ ಅವರು ದೂರುದಾರರಿಂದ ಜುಲೈ 1ರಂದು ಸಂಜೆ ತಮ್ಮ ಕಚೇರಿಯಲ್ಲಿ ಮೂರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಂತೆ ದಾಳಿ ನಡೆಸಿ ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಮ್ತಾಜ್ ಬೇಗಂ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.