ಕಾರ್ಮಿಕ ಇಲಾಖೆಯ ಇ-ಶ್ರಮಿಕ್ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ

ವಿಜಯಪುರ, ನ.30-ವಿಜಯಪುರದಲ್ಲಿ ಕಾರ್ಮಿಕ ಇಲಾಖೆಯ ಇ-ಶ್ರಮಿಕ್ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಇ-ಶ್ರಮಿಕ್ ಕಾರ್ಡ್‍ಗೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಅಪಲೊಡ್ ಮಾಡಿ ಕಾರ್ಡ್ ವಿತರಿಸುವ ಕಾರ್ಯದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ವಿಜಯಪುರ ಜಿಲ್ಲಾ ಘಟಕ ಮುಂದಾಗಿದೆ. ಕಾರ್ಯಕ್ರಮದಲ್ಲಿ 180 ಫಲಾನುಭವಿಗಳಿಗೆ ಇ-ಶ್ರಮಿಕ್ ಕಾರ್ಡ್ ವಿತರಿಸಲಾಯಿತು.
ವಿಪ್ರ ಸೇವಾ ಅಭಿಯಾನದ ಅಡಿಯಲ್ಲಿ ಸರಕಾರದ ಯೋಜನೆಯಾದ ಈ-ಶ್ರಮಿಕ್ ಕಾರ್ಡ್ ಹಾಗೂ ಇತರ ಸರಕಾರಿ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
ಈ ಅಭಿಯಾನಕ್ಕೆ ಚಾಲನೆ ನೀಡಿದ ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸರ್ಕಾರ ಕಾರ್ಮಿಕರ ಹಾಗೂ ಬಡವರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ, ಈ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ, ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿರುವುದು ಅರ್ಥಪೂರ್ಣ ಎಂದರು.
ವೇ.ಕೃಷ್ಣಶಾಸ್ತ್ರೀ ಗಲಗಲಿ ಸಾನಿಧ್ಯ ವಹಿಸಿದ್ದರು. ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಕೋಶಾಧ್ಯಕ್ಷ ವಿಶ್ವನಾಥ ಜೋಶಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಮೀರ ಕುಲಕರ್ಣಿ, ಸುಧೀಂದ್ರ ಇಲ್ಲಾಳ, ವೆಂಕಟೇಶ್ ಗುಡಿ, ಮನೋಜ ಗಿರಗಾಂವಿ, ಚೇತನ್ ಕುಲಕರ್ಣಿ, ಸಂತೋಷ್ ಕಾಳಗಿ, ಶ್ರೀಧರ ಕಲಕೇರಿ, ಅಶ್ವಿನ್ ಜೋಶಿ, ಪ್ರಭಂಜನ ಜಹಾಗಿರದಾರ,ವರುಣ ದಿವಾಣಜಿ, ವಿನಯ ಕುಲಕರ್ಣಿ, ಆನಂದ ಕುಲಕರ್ಣಿ, ಗೋವಿಂದ ದೇಶಪಾಂಡೆ, ಶಂಕರ ಜೋಶಿ, ವೈಭವ ಅಂಬೇಕರ್ ಉಪಸ್ಥಿತರಿದ್ದರು.