ಕಾರ್ಮಿಕ ಇಲಾಖೆಯಿಂದ ಟೂಲ್ ಕಿಟ್ ವಿತರಣೆ-ಡಾ.ಶಿವರಾಜ್ ಪಾಟೀಲ್

ರಾಯಚೂರು,ಜ.೦೮- ಜಿಲ್ಲಾ ಕಾರ್ಮಿಕ ಇಲಾಖೆಯ ವತಿಯಿಂದ ನಗರ ಶಾಸಕರ ಕಚೇರಿಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು, ಪ್ಲಂಬರ್, ಕಾರ್ಪೇಂಟರ್, ಪೇಂಟರ್ ಸೇರಿದಂತೆ ಇನ್ನಿತರ ಕಾರ್ಮಿಕರಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು.
ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಅವರು ಟೂಲ್ ಕಿಟ್ ವಿತರಿಸಿ ಮಾತನಾಡಿ, ಸರ್ಕಾರದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಟೂಲ್ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಟೂಲ್ ಕಿಟ್‌ಗಳನ್ನು ರಾಯಚೂರು ನಗರ ಕ್ಷೇತ್ರಕ್ಕೆ ನೀಡಲಾಗಿದೆ. ಜೊತೆಗೆ ಆರೋಗ್ಯದ ದೃಷ್ಠಿಯಿಂದ ಇಲಾಖೆಯ ವತಿಯಿಂದ ಪೌಷ್ಠಿಕ ಕಿಟ್‌ಗಳನ್ನು ನಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ತಿಳಿಸಿದರು.
ಒಟ್ಟು ನೂರು ಕಾರ್ಮಿಕರಿಗೆ ಟೂಲ್ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮಂಜುನಾಥ ಸೇರಿದಂತೆ ವಿವಿಧ ಕಾರ್ಮಿ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.