ಕಾರ್ಮಿಕ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ತಡೆಗೆ ಆಗ್ರಹ

ಕುಣಿಗಲ್, ನ. ೫- ತಾಲ್ಲೂಕು ಕಾರ್ಮಿಕ ಇಲಾಖೆಯಲ್ಲಿ ಮಧ್ಯವರ್ತಿ, ದಲ್ಲಾಳಿ ಹಾವಳಿಯಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಸರಿಪಡಿಸದಿದ್ದರೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕಾರ್ಮಿಕ ಸೇನೆಯ ರಾಜ್ಯಾಧ್ಯಕ್ಷ ಕೆ.ಎಸ್. ವೆಂಕಟಸುಬ್ಬಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಪತ್ರಕರ್ತರ ಸಭಾಗಂಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಹಾಗೂ ಮಾಹಿತಿ ಕೊರತೆಯಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ೨೦೦೬ರಿಂದ ೨೦ರವರೆಗೆ ೧೪ ವರ್ಷಗಳಲ್ಲಿ ೭ ಸಾವಿರ ಕಾರ್ಮಿಕರು ನೊಂದಾಯಿಸಿಕೊಂಡಿದ್ದು ಇವರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ದೊರೆತಿರುವುದಿಲ್ಲ. ಜತೆಗೆ ಇಲಾಖೆಯ ಅಧಿಕಾರಿಗಳು ಕಚೇರಿಗೆ ಸರಿಯಾಗಿ ಆಗಮಿಸದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುತ್ತಾರೆ. ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಬೇಕು ಎಂದರೆ ದಲ್ಲಾಳಿಗಳು ಮಧ್ಯವರ್ತಿಗಳು ಮೊರೆ ಹೋಗಬೇಕು. ಇವರ ಹಾವಳಿಯಿಂದ ಕಾರ್ಮಿಕರಿಗೆ ಸಿಗಬೇಕಾದ ವೇತನಗಳು ವೈದ್ಯಕೀಯ ಸೌಲಭ್ಯಗಳು ವಿದ್ಯಾರ್ಥಿ ವೇತನಗಳು ನಿವೃತ್ತಿ ವೇತನಗಳು ದೊರಕದೆ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದರು.
ಕೋವಿಡ್-೧೯ ಸಂದರ್ಭದಲ್ಲಿ ಸಂಕಷ್ಟ ಒಳಗಾಗಿದ್ದ ಕಾರ್ಮಿಕರಿಗೆ ವಿತರಿಸಲು ಎಂದು ಸರ್ಕಾರ ವಿತರಿಸಿದ ಆಹಾರದ ದಿನಸಿ ಕಿಟ್‌ಗಳು ನಿಜವಾದ ಕಾರ್ಮಿಕರಿಗೆ ದೊರಕಿರುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಸ್ಪಂದಿಸುತ್ತಿಲ್ಲ. ಕಟ್ಟಡ ಕಾರ್ಮಿಕ ವ್ಯಾಪ್ತಿಗೆ ೫೧ ವೃತ್ತಿಯ ಕಾರ್ಮಿಕರು ಒಳಪಡುತ್ತಿದ್ದು ನಿಜವಾದ ಕಾರ್ಮಿಕರನ್ನು ನೋಂದಾಯಿಸಿದೆ ತಮಗೆ ಇಷ್ಟ ಬಂದ ಮಧ್ಯವರ್ತಿ ದಲ್ಲಾಳಿಗಳು ನೊಂದಾಯಿಸಿಕೊಂಡು ನಿಜವಾದ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದಾರೆ. ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಬೇರ್ಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ನೊಂದಾಯಿತ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಕುಂದು ಕೊರತೆಯನ್ನು ಅಧಿಕಾರಿಗಳು ಕಲಿಯುವಂತೆ ಆಗಬೇಕು. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಫಲಾನುಭವಿಗಳಿಗೆ ಮಾಹಿತಿ ಲಭ್ಯವಿರುವುದಿಲ್ಲ.೦ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದರೆ ೧೫ ದಿನಗಳ ನಂತರ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ಕುಮಾರ್, ಪರಮಶಿವಯ್ಯ, ನಾಗರಾಜು, ಶಿವರಾಜು ಉಪಸ್ಥಿತರಿದ್ದರು.