ಕಾರ್ಮಿಕ ಅಧಿಕಾರಿ ದಾಳಿ : ಮೂವರು ಬಾಲಕ ಕಾರ್ಮಿಕರ ರಕ್ಷಣೆ

ವಿಜಯಪುರ,ಏ.28 :ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಅನಿರೀಕ್ಷಿತವಾಗಿ ದಾಳಿ ಕೈಗೊಂಡು ಮೂವರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಯಿತು.
ದಾಳಿಯಲ್ಲಿ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರ, 2 ನೆ ವೃತ್ತದ ಕಾರ್ಮಿಕ ನಿರೀಕ್ಷಕÀ ಜಗದೇವಿ ಸಜ್ಜನ, ಶಿಕ್ಷಣ ಇಲಾಖೆಯ ಸಿಆರ್‍ಪಿ ಜೆ.ಎಂ. ಕರ್ಜಗಿ, ಹೆಚ್ಚುವರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ, ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮ ಖೇಡಗಿ, ಮಕ್ಕಳ ಸಹಾಯವಾಣಿಯ ಮಂದಾಕಿನಿ ನಾಗಠಾಣ ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.