ಕಾರ್ಮಿಕ ಅದಾಲತ್ ಧ್ವನಿವರ್ಧಕ ವಾಹನಕ್ಕೆ ಚಾಲನೆ

ಚನ್ನಮ್ಮನ ಕಿತ್ತೂರ,ಜು.16: ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕÀ ಇಲಾಖೆ ತಾಲೂಕ ವಕೀಲರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದ ಪರ್ಹಾ ಸೈಯಿದ್ ಬೇಗಂ ಕಾರ್ಮಿಕ ಅದಾಲತ್‍ಗೆ ಧ್ವನಿವರ್ಧಕದ ರಿಕ್ಷಾ ವಾಹನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅವರು ಪ್ರಿತಿಯೊಬ್ಬ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರಾಸ್ತಾವಿಕ ನುಡಿಯನ್ನಾಡಿದ ತಾಲೂಕ ಕಾರ್ಮಿಕ ಅಧಿಕಾರಿ ಬಿ.ಎಸ್. ಬೆಟಗೇರಿ ತಾಲೂಕಾದ್ಯಂತ ಕಾರ್ಮಿಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರ ಪೂರ್ವಭಾವಿಯಾಗಿ ಕಾರ್ಮಿಕ ಅದಾಲತ್ ವಾಹನದ ಜಾಥಾ ಚಾಲನೆ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸೋಮಲಿಂಗಪ್ಪ ಹಲಗಿ, ಸಹಕಾರಿ ಅಭಿಯೋಜಕ ಎಂ.ದೇಶಪಾಂಡೆ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಠದ, ನ್ಯಾಯಾಧೀಶರುಗಳಾದ ಎಂ.ಎಸ್. ಸಾಣಿಕೊಪ್ಪ, ಎಂ.ಎಸ್.ಹಂಚಿನಮನಿ, ಆರ್.ಡಿ.ಬೇಟಗಾರ, ಎ.ಎಲ್. ವಾಲಿ, ಎ.ಬಿ.ಲದ್ದಿಗಟ್ಟಿ, ಬಿ.ಕೆ.ಸವದತ್ತಿ, ಎಸ್.ಡಿ.ಬೋಗೂರ, ಕೆ.ಎನ್.ಸರದಾರ, ಕಾರ್ಮಿಕ ಇಲಾಖೆಯ ಮಂಜು ಮುದಕನ್ನವರ, ಪ.ಪಂ.ಸಿಬ್ಬಂದಿ, ಕಾರ್ಮಿಕ ಇಲಾಖೆ ಸಿಬ್ಬಂದಿ, ಸೇರಿದಂತೆ ಸಾರ್ವಜನಿಕರಿದ್ದರು.