ಕಾರ್ಮಿಕರ ಹಣ ಸ್ವಂತಕ್ಕೆ ಬಳಸಿದ ಅಧ್ಯಕ್ಷರು; ಕ್ರಮಕ್ಕೆ ಮನವಿ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.29; ಹರಿಹರದ ದಿ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ  ಅಧ್ಯಕ್ಷರಾಗಿದ್ದವರು ಕಾರ್ಮಿಕರಿಗೆ ದೊರಕಬೇಕಾದ ಹಣವನ್ನು ಸಾಮೂಹಿಕವಾಗಿ ವಂಚಿಸಿ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂದು‌ ಕಾಂಗ್ರೆಸ್ ಲೇಬರ್ ಸೆಲ್ ವಿಭಾಗದ ಮಾಜಿ‌  ಜಿಲ್ಲಾಧ್ಯಕ್ಷ ಸ್ಯಾಂಸನ್.ವಿ ಆರೋಪಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಸಮಾಪನೆಗೊಂಡ ದಿ. ಮೈಸೂರು ಕಿರ್ಲೋಸ್ಕರ್ ಕಂ. ಅಮಿಟೆಡ್ ಹರಿಹರ, ಈ ಕಂಪನಿಯು ರನ್ನಿಂಗ್ ಇರುವ ಸಮಯದಲ್ಲಿ ಕಂಪನಿಯಲ್ಲಿ ಸಾವಿರಾರು ಖಾಯಂ ನೌಕರರು ಕೆಲಸ ಮಾಡುತ್ತಿದ್ದರು.  ಖಾಯಂ ಕಾರ್ಮಿಕರ ಸರ್ವತೋನ್ಮುಖ ಹಿತ ಕಾಪಾಡುವ ನಿಟ್ಟಿನಲ್ಲಿ ಸೊಸೈಟಿ ಸ್ಥಾಪಿಸಿಕೊಳ್ಳಲು ಕಾರ್ಮಿಕರು ನಿರ್ಧರಿಸಿ, ಅದರಂತೆ ದಿ. ಮೈಸೂರ್ ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿ ಯಂತ್ರಪುರ ಪೋಸ್ಟ್, ಹರಿಹರ ಎಂಬ ಹೆಸರಿನಲ್ಲಿ ಸೊಸೈಟಿಯನ್ನು ಸ್ಥಾಪಿಸಿಕೊಂಡು ನೋಂದಣಿಯನ್ನು ಕಾನೂನಿಗೆ ಅನುಗುಣವಾಗಿ ಮಾಡಲಾಗಿತ್ತು.  ತದನಂತರ ಕೆಲ ದಿನಗಳಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶ ಸೂಚನೆ ನಿರ್ದೇಶನಗಳ ಪ್ರಕಾರ ಸೊಸೈಟಿಯನ್ನು ಮುನ್ನಡೆಸಿಕೊಂಡು ಬರಲಾಗಿತ್ತು.ಸೊಸೈಟಿಯು ಸಮಾಪನೆಗೊಂಡು ೨೪ ವರ್ಷವಾಗಿದೆ.ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರ ದೊರೆತಿಲ್ಲ.ನ್ಯಾಯಾಲಯದಲ್ಲಿ ಈ  ದಾವೆ ಬಗ್ಗೆ ವಿಚಾರಣೆ ನಡೆಯುತ್ತಿದೆ.ಈ ಬಗ್ಗೆ ನಮ್ಮ ಹೇಳಿಕೆಯಿಲ್ಲ ಆದರೆ ಸೊಸೈಟಿ ಹಾಲಿ ಅಧ್ಯಕ್ಷರು ವಂಚಿಸಿರುವ ಕಾರ್ಮಿಕರ ಹಣವನ್ನು ಸೂಕ್ತ ತನಿಖೆ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.ನಮ್ಮ ಆರೋಪ ಕೇವಲ ಅಧ್ಯಕ್ಷ ರ ಮೇಲೆ ಮಾತ್ರ.ಅಧ್ಯಕ್ಷರು  ಸೊಸೈಟಿ ಹಣ ೭೫ ಲಕ್ಷ ರೂ ದುರುಪಯೋಗ ಮಾಡಿದ್ದಾರೆ ಈ ಹಣ ಕಾರ್ಮಿಕರದು ಈ ಕೂಡಲೇ ಕಾರ್ಮಿಕರಿಗೆ ಸೇರಬೇಕಾದ ಹಣ ನೀಡಬೇಕು‌ ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಎಂ.ಹುಲುಗಪ್ಪ,ಡಿ.ಎಂ ಹನುಮಂತಪ್ಪ,ವೈ.ಬಿ ಪ್ರಭಾಕರ್,ಎಸ್.ಕೆ ರಾಮಪ್ಪ ಉಪಸ್ಥಿತರಿದ್ದರು.