ಕಾರ್ಮಿಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಕೋಲಾರ,ಜ.೧೪:ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಅಸಂಘಟಿತ ಕಾರ್ಮಿಕರ ಪರಿಷತ್ ಹಾಗೂ ಕೋಲಾರ ಜಿಲ್ಲೆಯ ಅಡುಗೆ ಕೆಲಸಗಾರರ ಮತ್ತು ಸಹಾಯಕರ ಕ್ಷೇಮಾಭಿವೃದ್ಧಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ, ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಶ್ರೀ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರಮಿಕರ ಸಂಕ್ರಾಂತಿ, ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ, ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉಚಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕೆ.ವಿ ಸುರೇಶ್ ಕುಮಾರ್, ಹೆಚ್.ವಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಬಿ.ಎಸ್ ರಮೇಶ್ ಬಾಬು, ಡಿ.ಎಂ ಚೆನ್ನಯ್ಯ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪ್ರದಾನ ಸಿವಿಲ್ ನ್ಯಾಯಾಧೀಶ ಎ.ಎಸ್ ದಯಾನಂದ ಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ಹೆಚ್.ಆರ್ ರೇಣುಕಾ ಪ್ರಸನ್ನ, ಆಹಾರ ಸುರಕ್ಷತಾ ಅಧಿಕಾರಿ ವರಲಕ್ಷ್ಮಿ, ರಾಜಗೋಪಾಲ ಗೌಡ ಹಾಗೂ ಎ.ಎಸ್ ಗೀತಾ ವಕೀಲರ ಸಂಘ ಬಂಗಾರಪೇಟೆ, ಅಡುಗೆ ಸಂಘದ ಅಧ್ಯಕ್ಷರಾದ ಬಾಲಾಜಿ ಸಿಂಗ್, ಮಂಜುನಾಥ ಸಿಂಗ್, ಕೃಷ್ಣಮೂರ್ತಿ, ವಿಕ್ಟರ್ ಧಾಮು ಮತ್ತು ಮುಖಂಡರಾದ ಶ್ರೀಧರ್, ಸಿದ್ದಲಿಂಗಯ್ಯ, ವೆಂಕಟೇಶ್, ಶ್ರೀನಿವಾಸಗೌಡ, ಹುಲಿಬೆಲೆ ರಮೇಶ್, ವೆಂಕಟೇಶಪ್ಪ, ಶ್ರೀನಿವಾಸ, ವಿನಾಯಕ, ಕೃಷ್ಣ ಮೂರ್ತಿ, ಶ್ರೀನಾಥ್ ರೆಡ್ಡಿ, ಚಲಪತಿ, ಮುನಿರಾಜು, ಗೋವಿಂದಪ್ಪ, ಅಮೃತ, ನಾರಾಯಣಪ್ಪ ಮಧುಸೂದನ ರೆಡ್ಡಿ, ಪರಮೇಶ್, ರಾಮೇಗೌಡ, ಮುನಿಸ್ವಾಮಿ, ಜಿ ವಿ ಜಯರಾಮ್ ಮತ್ತು ಎಲ್ಲಾ ಕಾರ್ಮಿಕರು ಹಾಜರಿದ್ದರು.