ಕಾರ್ಮಿಕರ ಸುರಕ್ಷತೆಗಾಗಿ ಜಾಗೃತಿ ಸಭೆ

(ಸಂಜೆವಾಣಿ ವಾರ್ತೆ)
ವಾಡಿ: ಮೇ.14:ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ಪವರ್ ಪ್ಲಾಂಟ್ ಘಟಕದಲ್ಲಿ ಬುಧವಾರ ಕಾರ್ಮಿಕರಿಗಾಗಿ ಸುರಕ್ಷತಾ ಸಭೆ ನಡೆಯಿತು.
ಸಾಕ್ಷಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅಪಘಾತ ಘಟನೆಗಳನ್ನು ವಿವರಿಸಿ ಪ್ರಾಣಾಪಾಯ ತಪ್ಪಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರರಾವ ಜಾಗೀರದಾರ, ಕಾರ್ಖಾನೆಯೊಳಗೆ ಒಟ್ಟು 20 ಅಪಘಾತ ವಲಯಗಳನ್ನು ಗುರುತಿಸಲಾಗಿದೆ.
ಈ ಸ್ಥಳಗಳಲ್ಲಿ ವಿಶೇಷ ಸುರಕ್ಷತಾ ಸುಧಾರಣೆಗಳನ್ನು ತರಲಾಗಿದೆ. ಸ್ವಚ್ಚತೆಗಾಗಿ ಕಂಪನಿ ಎಷ್ಟು ಆಧ್ಯತೆ ನೀಡುತ್ತಿದೆಯೋ ಅಷ್ಟೇ ಪ್ರಾಮುಖ್ಯತೆ ಕಾರ್ಮಿಕರ ಸುರಕ್ಷತೆಗೆ ನೀಡಲಾಗುತ್ತಿದೆ. ಯಂತ್ರಗಳಿರುವ ಜಾಗದಲ್ಲಿ, ಬೆಲ್ಟ್ಗಳು ಸಾಗುವ ಮತ್ತು ಗಣಿಗಾರಿಕೆ ವಲಯಗಳಲ್ಲಿ ಕಾರ್ಮಿಕರು ಹೆಚ್ಚು ಜಾಗೃತರಾಗಿರುವ ಮೂಲಕ ಸುರಕ್ಷತೆ ಅನುಸರಿಸಬೇಕು. ಕಂಪನಿಯ ಯಾವೂದೇ ನಿಯಮಗಳನ್ನು ಉಲ್ಲಂಘಿಸದೆ ಕಾಯಕ ನಿಷ್ಠೆ ಮೆರೆಯಬೇಕು ಎಂದು ಹೇಳಿದರು.
ಕ್ಲಸ್ಟರ್ ಹೆಡ್ ವೈ.ಎಸ್.ರಾವ್, ಸುರಕ್ಷಾ ವಿಭಾಗದ ಮುಖ್ಯಸ್ಥ ಸಲ್ಲಾವುದ್ದೀನ್, ಮತ್ತು ವಿದ್ಯುತ್ ಘಟಕದ ಮುಖ್ಯಸ್ಥ ಸಮರ್ಪಣ ಡಾನ್ ಮಾತನಾಡಿದರು. ಸುರೇಶ ಶೆಟ್ಟಿ, ಪ್ರಾಣೇಶ ಜ್ಯೋಶಿ, ನರಸಿಂಹಮೂರ್ತಿ ಪೀಟಾಣಿ, ಮನೋರಂಜನ್ ಮಾಲ್, ಅಸೀಸ್, ಮಹ್ಮದ್ ಸೋಯಬ್, ವೆಂಕಟೇಶ, ಶ್ರೀಜೀಬ ಮನ್ನಾ, ರವಿ ಕೋಳಕೂರ, ಧರ್ಮರಾಜ, ಭುಪೇಂದ್ರ ಸಿಂಗ್ ಚವ್ಹಾಣ, ಸಾಜನ್, ರಮೇಶ ರಾಠೋಡ, ಗೋಪಾಲ ಪವಾರ, ರಾಕೇಶ ಮಿಶ್ರಾ, ಸದಾನಂದಗೌಡ, ಶಿವಾಜಿ ಚವ್ಹಾಣ, ರಘು ಕೋಲಿ, ಮಹೆಬೂಬ ಭಾಷಾ, ಮೋಹನ್, ದಶರಥ ಚವ್ಹಾಣ, ಕಿಶನ ಪಾಲ್ಗೊಂಡಿದ್ದರು. ಕಾರ್ಮಿಕರು ಸಾಮೂಹಿಕವಾಗಿ ಸುರಕ್ಷತಾ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸುರಕ್ಷತೆ ಮತ್ತು ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯುತ್ ಘಟಕದ ಕಾರ್ಮಿಕರಿಗೆ ಕಂಪನಿ ಅಧಿಕಾರಿಗಳು ಟ್ರೋಫಿ ನೀಡಿ ಗೌರವಿಸಿದರು.