ಕಾರ್ಮಿಕರ ಸಮಸ್ಯೆ ಆಲಿಸಿದ ತಾಪಂ ಅಧ್ಯಕ್ಷ ಮಹಮ್ಮದ್ ರಫೀ

ಗಂಗಾವತಿ, ನ.05: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಉದ್ಯೋಗ ನೀಡದ ಕ್ರಮ ಖಂಡಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸಂಘದ ತಾಲೂಕು ಸಮಿತಿಯು ಹಮ್ಮಿಕೊಂಡಿರುವ
ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಮುಂದುವರಿದೆ.
ಧರಣಿ ನಡೆಯುವ ಸ್ಥಳಕ್ಕೆ ಗುರುವಾರ ತಾಲೂಕು ಪಂಚಾಯತಿ ಅಧ್ಯಕ್ಷ ಮಹಮ್ಮದ್ ರಫೀ ಅವರು ಭೇಟಿ ನೀಡಿ ಧರಣಿ ನಿರಂತರ ಸಮಸ್ಯೆ ಆಲಿಸಿದರು.
ನಂತರ ಸಂಜೆವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೆರೆಗಳು ಸಹ ಸಂಪೂರ್ಣ ಭರ್ತಿಯಾಗಿವೆ. ಕಾರ್ಮಿಕರಿಗೆ ಕೆಲಸ ಕೊಡಬೇಕಾದರೆ ಕೆರೆ ಹೂಳು ಎತ್ತುವ ಕಾಮಗಾರಿಯೇ ಬೇಕು. ಹೀಗಾಗಿ ಸಮಸ್ಯೆಯಾಗಿದೆ. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಎಲ್ಲಿ ಕೆಲಸ ಕೊಡಬಹುದು ಎಂಬುದನ್ನು ಗಮನಿಸಲಾಗುವುದು. ಸಂಘದಿಂದ ಟ್ರ್ಯಾಕ್ಟರ್ ಬಾಡಿಗೆ ನೀಡಬೇಕು ಎಂಬ ಬೇಡಿಕೆ ಇದೆ. ಈ ಎಲ್ಲಾ ಬೇಡಿಕೆಗಳನ್ನು ತಾಪಂ ಇಒ ಅವರ ಜತೆ ಚರ್ಚಿಸಿ ಸಮಸ್ಯೆ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ಎಸ್.ಕನಕರಾಯ, ಕಾರ್ಯದರ್ಶಿ ಶೇಕಮ್ಮ, ಎ.ಎಲ್.ತಿಮ್ಮಣ, ಎಸ್.ಕನಕರಾಯ, ಮತ್ತಣ್ಣ, ಶೇಖಮ್ಮ, ಗಂಗಮ್ಮ, ಶಿವಮ್ಮ, ನೀಲಪ್ಪ, ನಿಂಗಪ್ಪ, ಎ.ಹುಲಗಪ್ಪ ಇದ್ದರು.