ಕಾರ್ಮಿಕರ  ಸಂಘದ ರಾಜ್ಯಾಧ್ಯಕ್ಷರಾಗಿ ಆನಂದಪ್ಪ ಆಯ್ಕೆ

ದಾವಣಗೆರೆ. ಜು.೩೦: ವಿಶ್ವ ಮಾನವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಸಂಘದ ರಾಜ್ಯಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಸ್ಲಂ ಬೋರ್ಡಿನ ನಿವೃತ್ತ ಇಂಜಿನಿಯರ್ ಎಸ್.ಎಲ್. ಆನಂದಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನನ್ನ ಸೇವಾವಧಿಯಲ್ಲಿ ಕಾರ್ಮಿಕ  ಹಾಗೂ ಸ್ಲಂ ನಿವಾಸಿಗಳೊಂದಿಗೆ ದಿನನಿತ್ಯ ಭಾವನಾತ್ಮಕ ಸಂಬಂಧವನ್ನು ಕಾಳಜಿ ಹಾಗೂ ಒಡನಾಟ ಹೊಂದಿದ್ದು,  ಸಂಘದ ಸರ್ವ ಸದಸ್ಯರು  ಸಂಘಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತಾರೆ ಎಂದರು.ರಾಜ್ಯ ಗೌರವಾಧ್ಯಕ್ಷ ಸ್ಥಾನಕ್ಕೆ ರೆಹಮಾನ್ ಅವರು ಆಯ್ಕೆಯಾಗಿದ್ದು, ರಾಜ್ಯ ಉಪಾಧ್ಯಕ್ಷರಾಗಿ ಜಿ. ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಮುಂದಿನ ದಿನಗಳಲ್ಲಿ ನಗರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ರುವ  ಸುಮಾರು ೬೦ ಕಟ್ಟಡ/ಇತರೆ ನಿರ್ಮಾಣ ಕಾರ್ಮಿಕ ಸಂಘಗಳಿದ್ದು, ಎಲ್ಲವನ್ನೂ ಸಂಪರ್ಕಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿಸಿ,  ಒಕ್ಕೂಟ ರಚಿಸಿ, ಕಾರ್ಮಿಕರಿಗೆ ದೊರಕಬೇಕಾದ ಅನುದಾನ , ಸೌಲಭ್ಯಗಳನ್ನು ದೊರಕಿಸಿ ಕೊಡಲು ಶ್ರಮಿಸುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಜಿ. ನಿಂಗಪ್ಪ, ಕಾರ್ಯಾಧ್ಯಕ್ಷ ವೆಂಕಟೇಶ್, ರೇಣುಕಾ ಯಲ್ಲಮ್ಮ, ಶಬ್ಬೀರ್ ಶಂಷುದ್ದೀನ್, ಅಕ್ಬರ್, ಸಾವಿತ್ರಮ್ಮ, ಇನ್ನಿತರರಿದ್ದರು.