
ಹಿರಿಯೂರು : ಮೇ.4- ಕಾರ್ಮಿಕರ ಸಂಕಷ್ಟಕ್ಕೆ ಸಹಕರಿಸಲು ಸದಾ ಸಿದ್ಧ ಎಂದು ಹಿರಿಯೂರು ತಾಲೂಕು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಈ ಪರಮೇಶ್ ಹೇಳಿದರು. ನಗರದ ಬೆಂಗಳೂರು ರಸ್ತೆಯಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಮಿಕರು ಮತ್ತು ಕುಟುಂಬ ವರ್ಗದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಸಂಕಷ್ಟಗಳಿಗೆ ಸಂಘಟನೆಯ ಮೂಲಕ ಸಹಾಯ ನೀಡಲು ಸಂಘವನ್ನು ಆರಂಭಿಸಿಕೊಂಡಿದ್ದೇವೆ, ಎಲ್ಲರೂ ಸಂಘದ ಸದಸ್ಯರಾಗಿ ಸಂಘದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ವಿಮಾ ಸೌಲಭ್ಯದ ಜೊತೆಗೆ ಒಂದೇ ರೀತಿಯ ಸಮವಸ್ತ್ರಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಅಂಚೆ ಇಲಾಖೆಯ ರಂಗನಾಥ್, ವಕೀಲರಾದ ಮೊಹಮ್ಮದ್ ರಫೀಕ್, ಅಸಂಘಟಿತ ಕಾರ್ಮಿಕರ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಫಜ್ಲುರಹಮಾನ್ ರವರು ಸಂಘಟನೆಯ ಸದಸ್ಯರಿಗೆ ಸಿಗಬಹುದಾದ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷರಾದ ರಾಜ್ ಕುಮಾರ್, ಮಹಮದ್ ನಯೀಮುಲ್ಲ ಉಪಾಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ ,ಕೆ.ನಾಗರಾಜ್, ಕಾರ್ಯದರ್ಶಿ ಬಸವರಾಜ್, ಸಹಕಾರ್ಯದರ್ಶಿ ಸೈಯದ್ ನಯಾಜ್, ಖಜಾಂಚಿ ಶಾಮು ಅಖಿಲ್, ಸಂಘಟನಾ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ, ಸೈಫುಲ್ಲ, ಸಾಧಿಕ್, ರವಿ, ಸಾದತ್ ಅಹಮದ್, ಮಣಿ, ಜಯಣ್ಣ, ಸಾಧಿಕ್ ಖಾನ್ , ಮತ್ತು ಕೃಷ್ಣಣ್ಣ ಹಿರಿಯ ಸಲಹೆಗಾರರಾದ ವೆಂಕಟೇಶ್, ಅಬ್ದುಲ್ ಕರೀಂ ಹಾಗೂ ನಿರ್ದೇಶಕರು ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.