ಕಾರ್ಮಿಕರ ಸಂಕಷ್ಟಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ

ಮಾನ್ವಿ,ಆ.೧೦-
ಕೇಂದ್ರ ಸರ್ಕಾರದ ಬಹುರಾಷ್ಟ್ರೀಯ ಕಂಪನಿಗಳ ಮೇಲಿನ ಒಲವನ್ನು ಕಡಿಮೆ ಮಾಡಿಕೊಂಡು ಕಾರ್ಮಿಕರ ವಿರೋಧಿ ನೀತಿಗಳನ್ನು ಕೈಬಿಟ್ಟು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಕಾರ್ಮಿಕರ ಕೇಲಸದ ಅವಧಿಯನ್ನು ದಿನಕ್ಕೆ ೧೨ ಗಂಟೆಗೆ ಹೆಚ್ಚಿಸಿರುವ ಅದೇಶವನ್ನು ಹಿಂಪಡೆಯಬೇಕು. ಕನಿಷ್ಟ ವೇತನ ೩೧೫೦೦ ರೂಗಳಿಗೆ ಹೆಚ್ಚಿಸಬೇಕು,ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಿ ೮ ಸಾವಿರ ಪಿಂಚಣಿಯನ್ನು ನೀಡಬೇಕು.ಸಾರ್ವಜನಿಕ ಉದ್ದೆಮೆಗಳನ್ನು ಖಾಸಗೀಕರಣ ಮತ್ತು ನಗದಿಕರಣವನ್ನು ನಿಲ್ಲಿಸಬೇಕು, ಲೇಬರ್ ಕೋಡ್ ರದ್ದು ಪಡಿಸಬೇಕು, ವಿದ್ಯುಚ್ಛಕ್ತಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಎಚ್ ಶರ್ಪುದ್ದೀನ್ ಪೋತ್ನಾಳ ಹೇಳಿದರು.
ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಛೇರಿಯವರೆಗೆ ಕಾರ್ಮಿಕ ಸಂಘಟನೆಗಳೊಡನೆ ಪ್ರತಿಭಟನೆ ಮೂಲಕ ತೆರಳಿ ದಂಡಧಿಕಾರಿ ಕಛೇರಿಯ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೇಂದ್ರ ಸರಕಾರವು ಕಾರ್ಮಿಕರ ಪರವಾಗಿ ನಿಲ್ಲದೆ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕಾರ್ಮಿಕರ ವಿರೋಧಿ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ಇಂದು ಕಾರ್ಮಿಕರು ತೀವ್ರವಾದ ಸಂಕಷ್ಟದಲ್ಲಿದ್ದಾರೆ ಎಂದರು.
ಪ್ರಮುಖವಾಗಿ ಸ್ಥಳೀಯ ಅಧಿಕಾರಿಗಳು ದಿನಗೂಲಿ ಉದ್ಯೋಗಖಾತ್ರಿ ಯೋಜನೆಯನ್ನು ಹೆಚ್ಚಿಸಬೇಕು,ಸ್ಕೀಮ್ ಕಾರ್ಮಿಕರಾದ ಅಂಗನವಾಡಿ,ಬಿಸಿಯೂಟ,ಆಶಾ ಕಾರ್ಯಕರ್ತರನ್ನು ಕನಿಷ್ಟವೇತನ ವ್ಯಾಪ್ತಿಗೆ ಒಳಪಡಿಸಬೇಕು, ವಲಸೆ ಕಾರ್ಮಿಕರಿಗೆ ಸೇವಾಭದ್ರತೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು, ಕೃಷಿ ಉತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿಟ್ಟು ಕನಿಷ್ಟ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು, ಅಂಗನವಾಡಿ ಬಾಡಿಗೆ ಕೇಂದ್ರಗಳ ಬಾಡಿಗೆ ಹಣವನ್ನು ಬಿಡುಗಡೆಗೊಳಿಸಿ ಅಂಗನವಾಡಿ ಸಿಬ್ಬಂದಿಗಳನ್ನು ಬಿ.ಎಲ್.ಓ.ಕೆಲಸದ ಅದೇಶವನ್ನು ಹಿಂಪಡೆಯಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಕೂಡ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು, ಬಜೆಟ್‌ನಲ್ಲಿ ಹೆಚ್ಚಳವಾದ ೧ಸಾವಿರ ಅರಿರಸ್ ಅನ್ನು ಕೂಡಲೇ ಬಿಸಿಯೂಟ ಸಿಬ್ಬಂದಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಮಿಕ ಕಾರ್ಯಕರ್ತರು ಇದ್ದರು.